ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಡಾ.ಉದಯಕುಮಾರ ಇರ್ವತ್ತೂರು ಅವರ ತುಳು ಅಕಾಡೆಮಿ ಪ್ರಕಟಿತ 'ಲೋಕಗೆಂದಿನ ಗಾಂಧಿಯೆರ್' ಕೃತಿಯ ಬಿಡುಗಡೆ ಕಾರ್ಯಕ್ರಮ ಶನಿವಾರ ತುಳುಭವನದ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ನಡೆಯಿತು.
ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಗಾಂಧೀಜಿಯವರು ಹಿಂಸೆಯಿಂದಲ್ಲ ಮನಸ್ಸಿನಿಂದ ಜಗತ್ತನ್ನು ಗೆದ್ದಿದ್ದಾರೆ, ಕಣ್ಣಿಗೆ ಸುಂದರವಾಗುವುದಲ್ಲ ಹೃದಯ ಸುಂದರವಾದಾಗ ಮಾತ್ರ ಮನಸ್ಸು ಗೆಲ್ಲಲು ಸಾಧ್ಯ, ಇತಿಹಾಸ ಹಾಗೂ ನಾಗರಿಕತೆಯ ಪಾಠಗಳೇ ಉತ್ತಮ ಸಂಸ್ಕೃತಿಯಾಗಿ ರೂಪುಗೊಳ್ಳುತ್ತವೆ, ಈ ಉತ್ತಮ ಸಂಸ್ಕೃತಿಯನ್ನು ನಮ್ಮದಾಗಿಸಿಕೊಳ್ಳಬೇಕು ಆದರೆ ಪ್ರಚಲಿತ ವಿದ್ಯಮಾನಗಳನ್ನು ನೋಡಿದರೆ ಹಾಗೆ ಆಗುತ್ತಿಲ್ಲ ಎಂದು ಕಾಣುತ್ತಿದೆ ಹಾಗಾಗಿ ಸತ್ಯ ಹಾಗೂ ನಿಷ್ಠೆ ಹೊಂದಿದ ಯಾರಿಗೂ ಹೆದರದಂತೆ ಬದುಕುವ ಶಕ್ತಿಯನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.
ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾತ್ಮ ಗಾಂಧಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಎನ್.ಇಸ್ಮಾಯಿಲ್ ಪುಸ್ತಕ ಪರಿಚಯಿಸಿದರು. ಗಾಂಧಿ ಚಿಂತನ ವೇದಿಕೆ ಸುಳ್ಯದ ಸಂಚಾಲಕ ಹರೀಶ್ ಬಂಟ್ವಾಳ, ಕದಿಕೆ ಟ್ರಸ್ಟ್ ಅಧ್ಯಕ್ಷರಾದ ಮಮತಾ ರೈ, ಗಾಂಧಿ ವಿಚಾರ ವೇದಿಕೆ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ, ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜ್ ಪ್ರಿನ್ಸಿಪಾಲ್ ಡಾ.ವಾಸುದೇವ ಬೆಳ್ಳೆ, ದ.ಕ.ಕೊರಗರ ಜಿಲ್ಲಾ ಸಂಘ ಅಧ್ಯಕ್ಷ ಎಂ.ಸುಂದರ ಬೆಳುವಾಯಿ, ಉದ್ಯಾವರ ನಾಗೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಅಕಾಡೆಮಿ ಸದಸ್ಯ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ ನಿರೂಪಿಸಿದರು. ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು.
ಗಾಂಧಿ ಜಯಂತಿ ಅಂಗವಾಗಿ 'ತುಳುನಾಡ್‌ಡ್ ಲೋಕಮಾನ್ಯೆರ್' ಕಾರ್ಯಾಗಾರ ಹಾಗೂ ಮಾತುಕತೆ ಕಾರ್ಯಕ್ರಮ ನಡೆಯಿತು.
Post a Comment