Top News

ಅಕ್ರಮ ಕೋಳಿ ಅಂಕಕ್ಕೆ ವಿಟ್ಲ ಪೋಲೀಸ್ ದಾಳಿ ; ಮೂವರ ಬಂಧನ ; ಐದು ಕೋಳಿಗಳು ಹಾಗೂ ನಗದನ್ನು ವಶಪಡಿಸಿಕೊಂಡ ಪೊಲೀಸರು

ಬಂಟ್ವಾಳ: ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಪಾತ್ರತೋಟ ಸಾರ್ವಜನಿಕ ಗುಡ್ಡೆಯ ಪ್ರದೇಶದಲ್ಲಿ ಅಕ್ರಮವಾಗಿ ಕೋಳಿ ಅಂಕ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ನವೆಂಬರ್ 30ರಂದು ಸಂಜೆ ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷಕ ಬಿ.ಎಸ್. ನಾಯಕ್ ಅವರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದರು. ಈ ವೇಳೆ ಪೊಲೀಸರನ್ನು ಕಂಡು ಕೆಲವರು ಪರಾರಿಯಾದರೂ, ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರನ್ನು ವಿಚಾರಿಸಿದಾಗ, ಬಂಟ್ವಾಳ ಇಡ್ಕಿದು ಗ್ರಾಮದ ಉಮೇಶ್ (38), ಬಂಟ್ವಾಳ ಅನಂತಾಡಿ ಗ್ರಾಮದ ಅಣ್ಣು (38), ಹಾಗೂ ಬಂಟ್ವಾಳ ವೀರಕಂಭ ಗ್ರಾಮದ ಉಮೇಶ್ (30) ಎಂಬುದು ತಿಳಿದುಬಂದಿದೆ. ಜೂಜಾಟಕ್ಕೆ ಬಳಸಲಾಗಿದ್ದ ₹2,100 ನಗದು, ಐದು ಕೋಳಿಗಳು, ಜೊತೆಗೆ ಕೋಳಿ ಅಂಕಕ್ಕೆ ಬಳಸಿದ ಕತ್ತಿ ಹಾಗೂ ದಾರಗಳನ್ನು ಪೊಲೀಸರು ಪತ್ತೆಹಚ್ಚಿ ಜಪ್ತಿ ಮಾಡಿಕೊಂಡಿದ್ದಾರೆ.

ಘಟನೆಯ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 177/2025 ಅಡಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87, 93 ಹಾಗೂ PREVENTION OF CRUELTY TO ANIMALS ACT, 1960ರ ಕಲಂ 3, 11ರಂತೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Post a Comment

Previous Post Next Post