ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆಯದಂತೆ ಟೆಂಪೋ ಟ್ರಾವೆಲರ್ ಚಾಲಕ ಪ್ರಯತ್ನಿಸಿದ ವೇಳೆ, ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
ಗುರುವಾಯನಕೆರೆಯಿಂದ ಅಳದಂಗಡಿ ಕಡೆಗೆ ಬರುತ್ತಿದ್ದ ಟೆಂಪೋ ಟ್ರಾವೆಲರ್, ವೇಗವಾಗಿ ಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ರಸ್ತೆ ದಾಟಲು ಮಹಿಳೆ ಪ್ರಯತ್ನಿಸಿದರು.
ಮಹಿಳೆಗೆ ಡಿಕ್ಕಿ ತಪ್ಪಿಸಲು ಚಾಲಕ ತಕ್ಷಣ ವಾಹನ ತಿರುಗಿಸಿದ ಪರಿಣಾಮ, ಟೆಂಪೋ ಡಿವೈಡರ್ ದಾಟಿ ಪಕ್ಕದ ರಸ್ತೆಯಲ್ಲಿ ಪಲ್ಟಿಯಾಯಿತು.
ಅಪಘಾತದಲ್ಲಿ ಚಾಲಕ ಸೇರಿದಂತೆ ಪ್ರಯಾಣಿಕರು ಗಾಯಗೊಂಡಿದ್ದು, ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
Post a Comment