Top News

ಎಸ್‌ಎಸ್‌ಎಲ್‌ಸಿ ಟಾಪರ್, ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ

ಅಫ್ಜಲಪುರ (ಕಲಬುರಗಿ): 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 619 ಅಂಕ ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ್ದ ಅಕ್ಷತಾ ಬಸವರಾಜ ಜಮಾದಾರ (17) ಎಂಬ ವಿದ್ಯಾರ್ಥಿನಿ ಬುಧವಾರ ಮುಂಜಾನೆ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

​ಕಲಬುರಗಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ಪದವಿ ಪೂರ್ವ ವಿಜ್ಞಾನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿ. ಅಕ್ಷತಾ ಹಾಸ್ಟೆಲ್‌ನಲ್ಲಿಯೇ ನೇಣು ಬಿಡುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುಕೊಂಡಿದ್ದರಿಂದ ಪಾಲಕರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಕೊಡಿಸಿದ್ದರು.
​"ಕಾಲೇಜಿನಲ್ಲಿ ಅತಂಕ ಆಗಿದೆ," ಎಂದು ಪೋಷಕರಿಗೆ ವಿದ್ಯಾರ್ಥಿನಿ ಹೇಳಿದ್ದಳು. ಬಳಿಕ ಆಕೆಯನ್ನು ಮನೆಗೆ ಕರೆಸಿಕೊಳ್ಳಲಾಗಿತ್ತು, ಡಿಸೆಂಬರ್ 2ರಂದು ತಂದೆ ಜೊತೆಗೆ ಕಾಲೇಜಿಗೆ ಮರಳಿ ಹೋಗಿದ್ದಳು. ಆದರೆ ಕಾಲೇಜಿಗೆ ಹೋದ  ಮರುದಿನವೇ ವಸತಿ ನಿಲಯಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Post a Comment

Previous Post Next Post