ಮಂಗಳೂರು : ಸ್ವಾರ್ಥವೇ ತುಂಬಿದ ಜಗತ್ತಿನಲ್ಲಿ ಪರರ ವಸ್ತುಗಳು ಸಿಕ್ಕರೆ ಅದನ್ನು ತಮ್ಮದೆಂದು ಬಿಂಬಿಸುವವರ ನಡುವೆ ದೇವದಾಸ್ ಶೆಟ್ಟಿಯವರು ವಿಭಿನ್ನವಾಗಿ ಕಾಣುತ್ತಾರೆ. ತನಗೆ ಸಿಕ್ಕ ಪರರ ಚಿನ್ನಾಭರಣಗಳನ್ನು ಅದರ ಮಾಲೀಕರಿಗೆ ವಾಪಾಸು ನೀಡಿ ಮಾದರಿಯಾಗಿದ್ದಾರೆ.
ಬೆಂಜನಪದವಿನ ಶುಭಲಕ್ಷ್ಮಿ ಸಭಾಂಗಣದ ವ್ಯವಸ್ಥಾಪಕರಾದ ದೇವದಾಸ್ ಶೆಟ್ಟಿಯವರು ತನ್ನ ವೃತ್ತಿ ಜೀವನದ 5 ವರ್ಷಗಳಲ್ಲಿ 21 ಬಾರಿ 400 ಗ್ರಾಂ ನಷ್ಟು ಬಂಗಾರದ ಆಭರಣ ಸಿಕ್ಕಿದ್ದು ಅದನ್ನು ಸೂಕ್ತ ವಾರಸುದಾರರಿಗೆ ತಲುಪಿಸಿ ವೃತ್ತಿ ನಿಷ್ಠೆ ಮೆರೆದಿದ್ದಾರೆ.
ಇವರು ಸೇವಾoಜಲಿ ಪ್ರತಿಷ್ಠಾನದ ಟ್ರಸ್ಟಿಗಳಾಗಿದ್ದು ಸಾಮಾಜಿಕ, ಧಾರ್ಮಿಕ ಕ್ಷೇತ್ರ ದಲ್ಲಿ ಸಕ್ರಿಯವಾಗಿದ್ದಾರೆ.
Post a Comment