ಚಂಡೀಗಢ: 'ತನಗಿಂತ ಚಂದ ಕಾಣುತ್ತಾರೆ' ಎನ್ನುವ ಕಾರಣಕ್ಕೆ ಮಹಿಳೆಯೊಬ್ಬಳು ತಾನೇ ಹೆತ್ತ ಮಗ ಸೇರಿದಂತೆ ನಾಲ್ಕು ಮಕ್ಕಳನ್ನು ಹತ್ಯೆಗೈದಿರುವುದು ಬಯಲಾಗಿದೆ.
ಕೊಲೆ ಆರೋಪದಡಿ ಪೂನಂ ಎನ್ನುವ ಮಹಿಳೆಯನ್ನುಪೊಲೀಸರು ಬಂಧಿಸಿದ್ದಾರೆ. ಸೋಮವಾರ ಸೋನಿಪತ್ ಮದುವೆ ಕಾರ್ಯಕ್ರಮದಲ್ಲಿ ಇಡೀ ಕುಟುಂಬ ಒಟ್ಟಾಗಿತ್ತು. ಆಗ ಆರೋಪಿ ಪೂನಂ ತನ್ನ ಸೊಸೆಯನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಂದಿದ್ದಾಳೆ. ಪೂನಂ ತಾನು 2023ರ ಡಿಸೆಂಬರ್ ತಿಂಗಳಿನಲ್ಲಿ ತನ್ನ ಮಗ, ಸೋದರ ಸೊಸೆ ಸೇರಿದಂತೆ ನಾಲ್ಕು ಮಕ್ಕಳನ್ನು ನೀರಿಗೆ ಮುಳುಗಿಸಿ ಕೊಂದಿದ್ದಳು.
ಈ ಬಗ್ಗೆ ಪೊಲೀಸ್ ಮುಂದೆ ತಪ್ಪು ಒಪ್ಪಿಕೊಂಡಿದ್ದಾಳೆ.
ಸೋನಿಪತ್‌ನಲ್ಲಿ ಮೃತಳಾದ ವಿಧಿಯೂ ಮನೆಯಲ್ಲಿ ಕಾಣದೇ ಇರುವ ಸಂದರ್ಭ ಹುಡುಕಾಡಿದಾಗ ಮಹಡಿಯ ಮೇಲಿನ ಕೊಠಡಿಯಲ್ಲಿ ಬಕೆಟ್‌ನಲ್ಲಿ ಮುಖ ಮುಳುಗಿರುವ ರೀತಿಯಲ್ಲಿ ಪತ್ತೆಯಾಗಿದ್ದು, ವಿಧಿಯ ತಂದೆ ನೀಡಿದ ದೂರಿನನ್ವಯ ಕ್ರಮ ತೆಗೆದುಕೊಂಡ ಪೊಲೀಸರು ಅನುಮಾನಸ್ಪದವಾಗಿ ಓಡಾಡುತ್ತಿದ್ದ ಪೂನಂಳನ್ನು ಬಂಧಿಸಿ ವಿಚಾರಿಸಿದಾಗ ನಿಜಾಂಶ ಬಯಲಾಗಿದೆ.
Post a Comment