Top News

ಬಂಗ್ರ ಕೂಳೂರು ಸಮೀಪ ಫಾಲ್ಗುಣಿ ನದಿಯ ಬಳಿಯಲ್ಲಿ ಗಾಂಜಾ, ಎಂ.ಡಿ.ಎಂ ಮಾರಾಟ ಯತ್ನ : ಇಬ್ಬರ ಬಂಧನ

ಮಂಗಳೂರು : ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಂಗ್ರ-ಕೂಳೂರು ಪ್ರದೇಶದ ಘಾಳ್ಗುಣಿ ನದಿಯ ಬಳಿ ಗಾಂಜಾ ಹಾಗೂ ಎಂ.ಡಿ.ಎಂ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಮಂಗಳವಾರ ಬೆಳಿಗ್ಗೆ ಬಂಧಿಸಿದ್ದಾರೆ. ಗೂಢಚರ ಮಾಹಿತಿ ಮೇರೆಗೆ ಪಣಂಬೂರು ಎಸಿ‌ಪಿ ಶ್ರೀಕಾಂತ್ ಕೆ., ಕಾವೂರು ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ರಾಘವೇಂದ್ರ ಬೈಂದೂರು ಅವರ ನೇತೃತ್ವದ ತಂಡವು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದೆ.

ಬಂಧಿತರನ್ನು ಶಾಫಿ ಅಹ್ಮದ್ (40), ತುಮಕೂರು ಮತ್ತು ಮೊಹಮ್ಮದ್ ಸಮೀರ್ (20), ತುಮಕೂರು ಎಂದು ಗುರುತಿಸಲಾಗಿದೆ. ಇವರ ಬಳಿಯಿಂದ ಸುಮಾರು 12 ಗ್ರಾಂ ಎಂ.ಡಿ.ಎಂ (ಅಂದಾಜು ಮೌಲ್ಯ ₹70,000), 275 ಗ್ರಾಂ ಗಾಂಜಾ (ಮೌಲ್ಯ ₹10,000) ಹಾಗೂ 2 ಮೊಬೈಲ್ ಫೋನ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳು ನಿಷೇಧಿತ ಮಾದಕ ವಸ್ತುಗಳನ್ನು ಬೆಂಗಳೂರಿನಲ್ಲಿ ನಿಗ್ರೊಗಳ ಬಳಿ ಖರೀದಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 177/2025 ಪ್ರಕರಣವನ್ನು NDPS ಕಾಯ್ದೆಯ ಕಲಂ 8(C), 21(C), 20(B) ಅಡಿಯಲ್ಲಿ ದಾಖಲಿಸಲಾಗಿದೆ.

ಪೊಲೀಸರು ತಿಳಿಸಿದ ವಿವರಗಳ ಪ್ರಕಾರ, ಶಾಫಿ ಅಹ್ಮದ್ ಎಂಬಾತನ ವಿರುದ್ಧ ಮಂಗಳೂರು ಮತ್ತು ತುಮಕೂರು ಸೇರಿದಂತೆ ವಿವಿಧ ಠಾಣೆಗಳಲ್ಲಿ ಒಟ್ಟು 9 ಅಪರಾಧ ಪ್ರಕರಣಗಳು ದಾಖಲಾಗಿದ್ದು, ಹಲವಾರು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ. ಇದಕ್ಕಾಗಿ ಸಂಬಂಧಿತ ನ್ಯಾಯಾಲಯಗಳು ಆತನ ವಿರುದ್ಧ ವಾರಂಟ್ ಹಾಗೂ ಪ್ರೊಕ್ಲಮೇಶನ್ ಜಾರಿಗೊಳಿಸಿದ್ದವು.

ಇನ್ನೊಬ್ಬ ಆರೋಪಿಯಾದ ಮೊಹಮ್ಮದ್ ಸಮೀರ್ ವಿರುದ್ಧ ತುಮಕೂರು ಜಿಲ್ಲಾ DCB Special ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಒಂದು ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ.

ಆರೋಪಿಗಳನ್ನು ವಿಚಾರಣೆಗಾಗಿ ಕಾವೂರು ಪೊಲೀಸರ ವಶದಲ್ಲಿರಿಸಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ

Post a Comment

Previous Post Next Post