ಮಂಗಳೂರು : ಪಾಥ್‌ವೇ ಮಾಡೆಲಿಂಗ್ ಸ್ಟುಡಿಯೋ (Pathway Modeling Studio) ಹಾಗೂ ಮೆರ್ಸಿ ಲೇಡೀಸ್ ಸಲೂನ್ & ಬ್ಯೂಟಿ ಅಕಾಡೆಮಿ (Mercy Ladies Saloon and Beauty Academy) ಅವರ ತರಬೇತಿ ಮತ್ತು ಮಾರ್ಗದರ್ಶನದಲ್ಲಿ ಮಂಗಳೂರಿನ ಮೂವರು ಪ್ರತಿಭಾಶಾಲಿ ಮಾಡೆಲ್‌ಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದಿದ್ದಾರೆ ಎಂದು ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ನಿರ್ದೇಶಕ ದೀಪಕ್ ಗಂಗೂಲಿ ಹೇಳಿದರು.
ಅವರು ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿದ್ಯಾ ಸಂಪತ್ (Vidya Sampath) ಅವರು ಮಿಸೆಸ್ ಅರ್ಥ್ ಇಂಟರ್‌ನ್ಯಾಷನಲ್ (Mrs. Earth International) ವಿಭಾಗದಲ್ಲಿ ಸ್ಪರ್ಧಿಸಲಿದ್ದು, ಫಿಲಿಪೈನ್ಸ್‌ನಲ್ಲಿ ಡಿ.2 ರಿಂದ ಡಿ.10 ರವರೆಗೆ ನಡೆಯುವ ಈ ಜಾಗತಿಕ ವೇದಿಕೆಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ನಿಯತಿ (Niyati) ಅವರು ಜೂನ್ 2026 ರಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಸೆಲೆಸ್ಟೈನ್ (Miss Universe Celestine) ಸ್ಪರ್ಧೆಗೆ ಭಾರತದಿಂದ ಆಯ್ಕೆಯಾಗಿದ್ದಾರೆ.
ಯಶೋಧಾ ರಾಜೇಶ್ (Yashoda Rajesh) ಅವರು ಜೂನ್ 2026 ರಲ್ಲಿ ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಪೇಜಂಟ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದರು.
ರಾಷ್ಟ್ರೀಯ ಮಟ್ಟದಲ್ಲಿ ನಡೆದ ಸ್ಪರ್ಧೆಗಳಲ್ಲಿ ತಮ್ಮ ವಿಭಾಗಗಳಲ್ಲಿ ‘ಇಂಡಿಯಾ ಕ್ರೌನ್’ ಗೆಲ್ಲುವ ಮೂಲಕ ಅಂತರಾಷ್ಟ್ರೀಯ ಸ್ಪರ್ಧೆಗೆ ಪ್ರವೇಶ ಪಡೆದಿರುವ ಈ ಮೂವರು ಮಂಗಳೂರು ನಗರದ ಹೆಮ್ಮೆ ಹೆಚ್ಚಿಸಿದ್ದಾರೆ. ಮಂಗಳೂರಿನ ಪ್ರತಿಭೆಗಳು ಜಾಗತಿಕ ವೇದಿಕೆಯಲ್ಲಿ ಮೆರೆಯಲಿರುವುದು ಸ್ಥಳೀಯರು ಹಾಗೂ ಫ್ಯಾಷನ್ ವಲಯಕ್ಕೆ ಖುಷಿಯ ಸಂಗತಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮರ್ಸಿ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ನಿರ್ದೇಶಕಿ ವೀಣಾ ಡಿಸೋಜಾ, ವಿದ್ಯಾ ಸಂಪತ್, ಯಶೋಧಾ ರಾಜೇಶ್, ನಿಯತಿ, ಟ್ರೈನರ್ ರಕ್ಷಿತಾ ನಾಯರ್, ಅನಿಶಾ ಗಂಗೂಲಿ ಉಪಸ್ಥಿತರಿದ್ದರು.
Post a Comment