ಅದ್ಯಪಾಡಿ : 16ನೇ ವರ್ಷದ ಹುಲಿವೇಷದ ಊದು ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ



ಅದ್ಯಪಾಡಿ ಶ್ರೀ ವೈದ್ಯನಾಥೇಶ್ವರ ಫ್ರೆಂಡ್ಸ್ ಟೈಗರ್, ಇನಾಯತ್ ಅಲಿ ಅಭಿಮಾನಿ ಬಳಗ ಸಹಯೋಗದಲ್ಲಿ ದಸರಾ ಮಹೋತ್ಸವದ ಅಂಗವಾಗಿ ೧೬ನೇ ವರ್ಷದ ಅದ್ಯಪಾಡಿ ಪಿಲಿಯ ಊದು ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಅದ್ಯಪಾಡಿ ವೈದ್ಯನಾಥೇಶ್ವರ ಭಜನಾ ಮಂಡಳಿಯಲ್ಲಿ ನಡೆಯಿತು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಘನ ಉಪಸ್ಥಿತಿಯನ್ನು ವಹಿಸಿದ್ದರು, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಗಿರೀಶ್ ಆಳ್ವ ಗೌರವಾಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ತಾಸೆಯ ಕಲಶ ರಚನೆಯಲ್ಲಿ ತೊಡಗಿಸಿಕೊಂಡಿರುವ ಶೇಕ್ ಮಹಮ್ಮದ್ ರಫೀಕ್ ಅವರನ್ನು ಗೌರವಿಸಲಾಯಿತು. ಹುಲಿವೇಷಕ್ಕೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿರುವ ದಿನೇಶ್, ದೇವೇಂದ್ರ, ಶಿವರಾಜ್, ರಮೇಶ್, ಮುಂಡಪ್ಪ, ಶಿವರಾಮ, ಕೃಷ್ಣ ಕೆ. ಅವರನ್ನು ಸನ್ಮಾನಿಸಲಾಯಿತು


      .

         
ಕೆಪಿಸಿಸಿ ಸದಸ್ಯ ಪೃಥ್ವಿರಾಜ್ ಆರ್.ಕೆ., ಮಾಜಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಯು.ಪಿ.ಇಬ್ರಾಹಿಂ, ಕಾಂಗ್ರೆಸ್ ಮುಖಂಡ ಸುರೇಂದ್ರ ಕಂಬಳಿ, ಚಂದ್ರಹಾಸ ಟಿ.ಅಮೀನ್, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ನ ಅರ್ಜುನ್ ಭಂಡಾರ್ಕರ್, ಉದ್ಯಮಿ ಪದ್ಮನಾಭ ಕೋಟ್ಯಾನ್, ಜಿಲ್ಲಾ ಯುವ ಕಾಮಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್, ಅಶ್ರಫ್ ಅಡ್ಯಾರ್, ಬೀಬಿಲಚ್ಚಿಲ್ ಕ್ಷೇತ್ರದ ಆಡಳಿತ ಮೊಕ್ತೇಸರ ಮೋನಪ್ಪ ಮೇಸ್ತ್ರಿ, ಯೂತ್ ಕಾಂಗ್ರೆಸ್‌ನ ರೂಪೇಶ್ ರೈ, ಪ್ರಸಾದ್ ಮಲ್ಲಿ ಉದ್ಯಮಿವಿಕ್ರಾಂತ್ ಕಂಬಳಿ, ಬದ್ರೀಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಹ್ಮದ್ ಉಙÁಕ, ಕೆಎಸ್‌ಬಿಎಲ್‌ನ ಶಿವಪ್ರಸಾದ್ ಏ.ಪಿ., ಗ್ರಾ.ಪಂ.ಸದಸ್ಯರಾದ ವಿಜಯ ಗೋಪಾಲ ಸುವರ್ಣ, ಜೀವನ್ ಮಲ್ಲಿ, ಸುನೀಲ್ ಕುಮಾರ್, ಮಾಲತಿ ಶಿವರಾಜ್, ಉದ್ಯಮಿ ಜಾನ್ಸನ್ ಡಿಸೋಜಾ, ವೈದ್ಯನಾಥೇಶ್ವರ ಭಜನಾ ಮಂಡಳಿ ಅಧ್ಯಕ್ಷ ಕೃಷ್ಣ, ವೈದ್ಯನಾಥೇಶ್ವರ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ಕೆ., ಕೌಶಿಕ್ ಮೊದಲಾದವರು ಉಪಸ್ಥಿತರಿದ್ದರು. ರೋಹಿತ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.


Post a Comment

Previous Post Next Post