Top News

ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ


ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಮಂಗಳೂರು ಘಟಕದ 7ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಗರದ ನಂತೂರು ಪದುವ ಶಾಲಾ ಸಭಾಂಗಣದಲ್ಲಿ ನಡೆಯಿತು.

ಬಾಲಕೃಷ್ಣ ಕದ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ  ಬಾಬು ಕೆ.ವಿಟ್ಲಾ, ಜಿಲ್ಲಾ ಕಾರ್ಯದರ್ಶಿ ಮ್ಯಾಕ್ಸಿಮ್ ಸಿಕ್ವೆರ, ಘಟಕದ ಸ್ಥಾಪಕಾಧ್ಯಕ್ಷ ಉಮಾನಾಥ ಸುವರ್ಣ, ನಿಕಟಪೂರ್ವ ಅಧ್ಯಕ್ಷ ಯುವರಾಜ್ ಮೂಡುಶೆಡ್ಡೆ, ಘಟಕದ ಪ್ರಧಾನ ಕಾರ್ಯದರ್ಶಿ ಸ್ಪಂದನ ನಾಗರಾಜ್, ಕೋಶಾಧಿಕಾರಿ ಗಾಡ್ವಿನ್ ಡಿಸೋಜ ಗೌರವಾಧ್ಯಕ್ಷ  ಹರೀಶ್ ಪಡೀಲ್ ಮೊದಲಾದವರು ಉಪಸ್ಥಿದರಿದ್ದರು.

ವಾರ್ಷಿಕ ವರದಿ, ವಾರ್ಷಿಕ ಲೆಕ್ಕಪತ್ರ ಮಂಡನೆಯ ನಂತರ ಶಾಮಿಯಾನ ಉದ್ಯಮದ ಮಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಕ್ಲವೆರ್ ಡಿಸೋಜ ಪ್ರಾಸ್ತಾವಿಕ ಭಾಷಣ ಮಾಡಿದರು.  ಉಮಾನಾಥ ಸುವರ್ಣ ಸ್ವಾಗತಿಸಿದರು, ಯುವರಾಜ್ ಮೂಡುಶೆಡ್ಡೆ ವಂದಿಸಿದರು.

1 Comments

Post a Comment

Previous Post Next Post