ಗುರುಪುರ ಕೈಕಂಬದ ದಾಮೋದರ ಜ್ಯುವೆಲ್ಲರ್ಸ್‌ನ 25ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಚಿನ್ನ ಖರೀದಿ ಸಂದರ್ಭ ವೆಸ್ಟೇಜ್‌ನಲ್ಲಿ ಶೇ.7ರಷ್ಟು ರಿಯಾಯಿತಿ ದರದಲ್ಲಿ ಬಂಗಾರ ನೀಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ವಿವೇಕ್ ಪ್ರಭುರವರು ತಿಳಿಸಿದ್ದಾರೆ.
ಆರ್ಥಿಕವಾಗಿ ಬಳತ್ತಿರುವ ಮಧ್ಯಮ ವರ್ಗದ ಕುಟುಂಬಕ್ಕೆ ಇದರಿಂದ ಸಹಕಾರವಾಗಲಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಅವರು ತಿಳಿಸಿದರು. ಈ ಸಂಸ್ಥೆಯನ್ನು 25 ವರ್ಷದ ಹಿಂದೆ ಕಟ್ಟಿಬೆಳೆಸಿದ್ದು ಇದೀಗ ಹೆಮ್ಮರವಾಗಿ ಬೆಳೆದಿದ್ದು ಸಂತೋಷದ ವಿಚಾರವಾಗಿದೆ ಎಂದರು. ಶ್ರೀ ದಾಮೋದರ ಜ್ಯುವೆಲ್ಲರ್ಸ್ ಮಳಿಗೆಯು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಗ್ರಾಹಕರಿಂದ ಈ ಸಂಸ್ಥೆ ಅಭಿವೃದ್ಧಿ ಹೊಂದಿದ್ದ ಹಿನ್ನೆಲೆ ಆಗಸ್ಟ್ 1 ರಿಂದ ಡಿಸೆಂಬರ್ 31 ರ ವರೆಗೆ ಗ್ರಾಹಕರಿಗೋಸ್ಕರ ಸಂಸ್ಥೆಯಿಂದ ನೀಡುವ ಚಿಕ್ಕ ಕೊಡುಗೆಯಾಗಿದೆ ಎಂದು ತಿಳಿಸಿದರು.
ಶ್ರೀ ದಾಮೋದರ ಜ್ಯುವೆಲ್ಲರ್ಸ್ ಗೆ ಬರುವ ಇತರೆ ಗ್ರಾಹಕರಿಗೂ ಆಕರ್ಷಕ ಹಾಗೂ ವಿಶೇಷ ದರದಲ್ಲಿ ಕೊಡುಗೆ ನೀಡಲಿದ್ದು ಈ ಹಿನ್ನೆಲೆ ಗ್ರಾಹಕರು ಈ ಆಕರ್ಷಕ ಕೊಡುಗೆಯನ್ನು ಸದುಪಯೋಗಗೊಳಿಸುವಂತೆ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಸಿದ್ದಾರ್ಥ್ ವಿವೇಕ್ ಹಾಗೂ ಶಾಂತೇರಿ ಪ್ರಭುರವರು ಉಪಸ್ಥಿತರಿದ್ದರು.