Top News

ಬಣ್ಣ ಕಳಚುವ ಮುನ್ನವೇ ಇಹಲೋಕ ತ್ಯಜಿಸಿದ ಮಂದಾರ್ತಿ ಮೇಳದ ಬಣ್ಣದ ವೇಷಧಾರಿ, ಯಕ್ಷಗಾನ ಕಲಾವಿದ ಈಶ್ವರ ಗೌಡ

ಉಡುಪಿ: ಮಂದಾರ್ತಿ 2ನೇ ಮೇಳದ ಬಣ್ಣದ ವೇಷಧಾರಿ ಈಶ್ವರ ಗೌಡ ನೆಮ್ಮಾರ್ ಮಹಿಷಾಸುರ ಪಾತ್ರ ನಿರ್ವಹಿಸಿದ ಬಳಿಕ ಪೂರ್ಣ ಬಣ್ಣ ಕಳಚುವ ಮುನ್ನವೇ ಚೌಕಿಯಲ್ಲೇ ಹೃದಯಾಘಾತದಿಂದ ಕುಸಿದು ನಿಧನರಾದ ಘಟನೆ ಬುಧವಾರ( ನ.19) ಮಧ್ಯ ರಾತ್ರಿ ಕುಂದಾಪುರದ ಸೌಡ ಸಮೀಪ ನಡೆದಿದೆ.

ಪ್ರತಿಭಾನ್ವಿತ ಕಲಾವಿದ ಶೃಂಗೇರಿ ಸಮೀಪದ ನೆಮ್ಮಾರ್ ನಿವಾಸಿಯಾಗಿದ್ದ ಈಶ್ವರ ಗೌಡ ಅವರು ದೇವಿ ಮಾಹಾತ್ಮೆ ಪ್ರಸಂಗದಲ್ಲಿ ಮಹಿಷಾಸುರ ನಿರ್ವಹಿಸುತ್ತಿದ್ದರು. ಪಾತ್ರ ಕೊನೆಯಾಗುತ್ತಿದ್ದಂತೆ ಸಂಪೂರ್ಣ ವೇಷ ಕಳಚುವ ಮುನ್ನವೇ ಹೃದಯಾಘಾತದಿಂದ ಕುಸಿದಿದ್ದಾರೆ. ಸಹಕಲಾವಿದರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಇಹಲೋಕ ತ್ಯಜಿಸಿದ್ದರು.

ಅವರ ತಂದೆ ಅದೇ ಪ್ರಸಂಗದಲ್ಲಿ ರಕ್ತ ಬೀಜಾಸುರ ಪಾತ್ರವನ್ನು ನಿರ್ವಹಿಸುತ್ತಿದ್ದರು. ಬುಧವಾರ ರಾತ್ರಿ ವಿಶೇಷವಾಗಿ ತಂದೆಯ ಆಶೀರ್ವಾದ ಪಡೆದು ರಂಗವನ್ನು ಏರಿದ್ದರಂತೆ ಈಶ್ವರ ಗೌಡರು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Post a Comment

Previous Post Next Post