ಪಿಲಿಪೈನ್ಸ್‌ನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಗ್ರ್ಯಾಂಡ್ ವಿನ್ನರ್ ಪ್ರಶಸ್ತಿ ಗೆದ್ದ ಮಂಗಳೂರಿನ ವಿದ್ಯಾ ಸಂಪತ್ ಸೋಮವಾರ ತವರಿಗೆ ಮರಳಿದ ಅವರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ವಿಮಾನ ನಿಲ್ದಾಣದಲ್ಲಿ ತುಳುನಾಡನ್ನು ಪ್ರತಿನಿಧಿಸುವ ಬಾವುಟ ಹಾಗೂ ಭಾರತದ ಧ್ವಜಗಳೊಂದಿಗೆ ಆಗಮಿಸಿದ ವಿದ್ಯಾ ಸಂಪತ್ ಅವರಿಗೆ ಚೆಂಡೆ ವಾದನ ಸಹಿತವಾಗಿ ಸ್ವಾಗತಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಬಂಧು ಮಿತ್ರರು ಮಾಲೆ ಹಾಕಿ, ಹೂಗುಚ್ಛ ನೀಡಿ, ಅಪ್ಪುಗೆ ನೀಡಿ ಹಾರೈಸಿ ಬರ ಮಾಡಿಕೊಂಡರು.
ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ನಿರ್ದೇಶಕರಾದ ಪಾತ್‌ವೇ ಮಾಡೆಲಿಂಗ್ ಸ್ಟುಡಿಯೋದ ದೀಪಕ್ ಗಂಗೂಲಿ, ಮರ್ಸಿ ಬ್ಯೂಟಿ ಅಕಾಡೆಮಿಯ ಮರ್ಸಿ ವೀಣಾ ಡಿಸೋಜಾ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Post a Comment