ಭಾರತ ಮಹಿಳಾ ಕಬಡ್ಡಿ (India women team) ತಂಡ ಮುಡಿಗೇರಿಸಿಕೊಂಡಿತು. ಸತತ ಎರಡನೇ ಬಾರಿ ಕಬಡ್ಡಿ ವಿಶ್ವಕಪ್‌ನ್ನು ತನ್ನದಾಗಿಸಿಕೊಂಡು ಭಾರತದ ವನಿತೆಯರು ಕಬಡ್ಡಿ ಅಂಕಣದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದರು.
ಸೋಮವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆ ( Chinese Taipei) ವಿರುದ್ಧ ಭಾರತ ಮಹಿಳಾ ತಂಡ 35-28 ಅಂತರದಲ್ಲಿ ಗೆದ್ದು ಬೀಗಿತು. ಚೈನೀಸ್ ತೈಪೆ ಕಠಿಣ ಪೈಪೋಟಿ ನೀಡಿತ್ತಾದರೂ ಭಾರತದ ವನಿತೆಯರು ಅದನ್ನು ಮೆಟ್ಟಿ ನಿಂತು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಫೈನಲ್‌ವರೆಗೂ ಅಜೇಯವಾಗಿ ತಲುಪಿದ್ದ ಭಾರತ ಗುಂಪು ಹಂತದ ನಾಲ್ಕೂ ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು. ಅಂತಿಮ ನಾಲ್ಕರ ಪಂದ್ಯದಲ್ಲಿ ಇರಾನ್ ವಿರುದ್ಧ ಭಾರತ ಮಹಿಳಾ ತಂಡ, ಇರಾನ್ ವಿರುದ್ಧ 33-21 ಅಂತರಲ್ಲಿ ಗೆದ್ದು ಫೈನಲ್ ಪ್ರವೇಶ ಮಾಡಿತ್ತು. ಚೈನೀಸ್ ತೈಪೆ ಕೂಡ ಅಜೇಯವಾಗಿ ಫೈನಲ್‌ಗೆ ಬಂದಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ವಿರುದ್ಧ ಚೈನೀಸ್ ತೈಪೆ ತಂಡ 25-18ರ ಅಂತರದಲ್ಲಿ ಗೆದ್ದು ಪ್ರಶಸ್ತಿ ಸುತ್ತಿಗೆ ಬಂದಿತ್ತು.
ಭಾರತ ಹಾಗೂ ಚೈನೀಸ್ ತೈಪೆ ತಂಡಗಳ ನಡುವಣ ಫೈನಲ್ ಪಂದ್ಯವು ತೀವ್ರ ಪೈಪೋಟಿಯಿಂದ ಕೂಡಿತ್ತು, ಆರಂಭಿಕ ಹಂತಗಳಲ್ಲಿ ಚೈನೀಸ್ ತೈಪೆ ಭಾರತದ ರಕ್ಷಣೆಗೆ ಸವಾಲು ಹಾಕಿತು. ಆದಾಗ್ಯೂ, ಪಂದ್ಯದ ನಿರ್ಣಾಯಕ ಕ್ಷಣಗಳಲ್ಲಿ ಹಿಡಿತವನ್ನು ಕಾಯ್ದುಕೊಂಡು ಶಿಸ್ತುಬದ್ಧ ಟ್ಯಾಕಲ್‌ಗಳು ಮತ್ತು ಸಮಯೋಚಿತ ದಾಳಿಗಳ ಮೂಲಕ ಭಾರತ ಕ್ರಮೇಣ ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸಿತು.
ಮಂಗಳೂರಿನ ತರುಣಿ ಧನಲಕ್ಷ್ಮೀ ಪೂಜಾರಿಯವರು ಈ ಪ್ರಶಸ್ತಿ ವಿಜೇತ ತಂಡದಲ್ಲಿರುವುದು ವಿಶೇಷವಾಗಿದ್ದು, ಕರ್ನಾಟಕದಿಂದ ರಾಷ್ಟ್ರ ತಂಡಕ್ಕೆ ಆಯ್ಕೆಯಾಗಿದ್ದ ಏಕೈಕ ಕಬಡ್ಡಿ ಪಟುವಾಗಿದ್ದ ಅವರು ಟೂರ್ನಮೆಂಟ್ ಉದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
Post a Comment