ನವರಾತ್ರಿ ಹಬ್ಬದ ವೇಳೆ ಹುಲಿವೇಷದ ಜತೆಗೆ ಸಿಂಹ, ರಾಕ್ಷಸ, ಕರಡಿ ಸೇರಿದಂತೆ ಹಲವು ವೇಷಗಳನ್ನು ಎಲ್ಲರೂ ನೋಡಿರುತ್ತಿರಿ ಆದರೆ ಇದೆಲ್ಲದರ ಮಧ್ಯೆ ಎಲ್ಲರ ಮನ ಗೆಲ್ಲುವ ಸೊಗಸಾದ ವೇಷವೊಂದಿದೆ ಅದು “ನಪ್ಪು ಬಾಲೆ”.
ನಪ್ಪು ಬಾಲೆ ವೇಷ ಬಹುತೇಕ ಕಾಣ ಸಿಗುವುದೇ ಕಡಿಮೆಯಾಗಿದ್ದರೂ ಅದನ್ನು ಆಧುನಿಕ ಮನಸ್ಸುಗಳಿಗೆ ದಾಟಿಸುವ ನಿಟ್ಟಿನಲ್ಲಿ ಒಂದು ಆಲ್ಬಂ ಸಾಂಗ್ ಹೊರಬಂದಿದ್ದು, ಈಗಾಗಲೇ 2ಲಕ್ಷಕ್ಕೂ ಅಧಿಕ ಮಂದಿ ಈ ಹಾಡನ್ನು ವೀಕ್ಷಿಸಿದ್ದಾರೆ.
ತುಳು ಭಾಷೆಯಲ್ಲಿ “ನಲಿಪ್ಪು ಬಾಲೆ, ನಲಿಪ್ಪು ಬೈತ್ತರಿತ ನುಪ್ಪು, ಚೇರಂಟೆದ ಚಟ್ನಿ ಮಗ ಎನ್ನುತ್ತಾ ವಿಚಿತ್ರ ಆಹಾರಗಳ ಪಟ್ಟಿಯನ್ನು ಹಾಡುತ್ತಾ, ದೊಣ್ಣೆಯನ್ನು ನೆಲಕ್ಕೆ ಕುಟ್ಟಿ, ಗೆಜ್ಜೆಸದ್ದು ಮಾಡುತ್ತಾ ಕುಣಿಯುವ ವೃದ್ಧನ ಪಾತ್ರ ಗ್ರಾಮೀಣ ನೈಜ ಸೊಗಡಿನಿಂದ ತುಂಬಿರುತ್ತದೆ.
ಈ ಸೊಗಡನ್ನೇ ತುಂಬಿಕೊಂಡು ವಿಡಿಯೋ ಸಹಿತ ಹಾಡನ್ನು ಭಾವಕಥಾ ಫಿಲಂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಮಾಡಲಾಗಿದೆ. ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾದ ಈ ಆಲ್ಬಂ ಸಾಂಗ್ ಈಗಾಗಲೇ ಜಮಮನ ಗೆದ್ದಿದೆ.
ಸುಜಲ್ ಶೆಟ್ಟಿ ರಚಿಸಿ ನಿರ್ದೇಶಿಸಿದ್ದು, ಡಾ.ವಿದ್ಯಾ ಶಾರದಾ ಭಟ್ ನಿರ್ಮಿಸಿದ ಈ ಹಾಡು ಎಂಕೆಟಿ ಹಾಗೂ ಸುಜಲ್ ಶೆಟ್ಟಿ ಪರಿಕಲ್ಪನೆಯಲ್ಲಿ ಮೂಡಿಬಂದಿದೆ. ಸುರಾಜ್ ಸಾಲ್ಯಾನ್ ಮುಖ್ಯ ಭೂಮಿಕೆಯಲ್ಲಿದ್ದು, ನಿಶ್ಚಿತ್ ರಾಜ್ ಸಂಗೀತ ನೀಡಿರುವ ಜತೆಗೆ ಗಾಯನವನ್ನೂ ಮಾಡಿದ್ದಾರೆ, ಸಂಪತ್ ಎಸ್.ಬಿ. ಹೊಸಬೆಟ್ಟು, ಸಹನಾ ಭಟ್ ಕೂಡ ಗಾಯನವನ್ನು ಮಾಡಿದ್ದಾರೆ. ಸ್ಯಾಂಡಿ, ಪುನೀತ್ ಮುನ್ನಾಸ್ ಹಾಗೂ ಅಖಿಲ್ ಸುಂದರ ದೃಶ್ಯಗಳನ್ನು ಸೆರೆ ಹಿಡಿದಿದ್ದು, ರೋಹನ್ ಕುಲಾಲ್ ಸಂಕಲನವನ್ನು ಮಾಡಿದ್ದಾರೆ. ಪ್ರಜ್ವಲ್, ಭರತ್, ಶೈಲೇಶ್ ನಿರ್ದೇಶನ ತಂಡದಲ್ಲಿದ್ದು, ಶ್ರೇಯಾ ಎಂ.ಕುಲಾಲ್ ನೃತ್ಯ ನಿರ್ದೇಶನ ಮಾಡಿದ್ದಾರೆ. ರಾಮಣ್ಣ ಪುಂಚಮೆ ಎನ್ನುವವರು ಕಳೆದ 40 ವರ್ಷಗಳಿಂದ ಈ 'ನಪ್ಪು ಬಾಲೆ' ವೇಷ ಧರಿಸಿ ವೇಷವನ್ನು ಜೀವಂತವಾಗಿ ಇರಿಸಿದ್ದು, ಅವರೇ ನಮ್ಮ ಸ್ಪೂರ್ತಿ ಎನ್ನುತ್ತದೆ ತಂಡ.
Post a Comment