Top News

ಭಾರತದ ವನಿತೆಯರಿಗೆ ಚಾಂಪಿಯನ್ ಪಟ್ಟ ; ದಕ್ಷಿಣ ಆಫ್ರಿಕಾವನ್ನು ಮಣಿಸಿ ಚೊಚ್ಚಲ ವಿಶ್ವಕಪ್ ಗೆದ್ದ ಭಾರತ ; ಭಾರತದಲ್ಲಿ ವನಿತಾ ಕ್ರಿಕೆಟ್‌ನ ಹೊಸ ಯುಗ ಆರಂಭ !

ಮುಂಬಯಿ : ಮುಂಬಿಯಿಯ ಡಿವೈ ಪಾಟಿಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವನಿತಾ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು 52ರನ್‌ಗಳಿಂದ ಮಣಿಸಿ ವಿಶ್ವ ಕಪ್ ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 7 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿ 299 ರನ್‌ಗಳ ಗುರಿಯನ್ನು ಹರಿಣಗಳ ಮುಂದಿಟ್ಟಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ನಾಯಕಿ ವೊಲ್ವಾರ್ಟ್ ವೀರೋಚಿತ ಶತಕ ಗಳಿಸಿದರೂ ಗುರಿ ತಲುಪಲು ಸಾಧ್ಯವಾಗಲಿಲ್ಲ.

ಭಾರತದ ಪರವಾಗಿ ಡೈರೆಕ್ಟ್ ಫೈನಲ್‌ಗೆ ಎಂಟ್ರಿ ಪಡೆದಿದ್ದ ಶಫಾಲಿ ವರ್ಮ ಅವರ 87ರನ್, ದೀಪ್ತಿ ಶರ್ಮ 58 ರನ್‌ಗಳ ಅರ್ಧಶತಕಗಳ ಆಟದಿಂದ ಸವಾಲಿನ ಮೊತ್ತ ಪೇರಿಸಿತು. ಸ್ಮೃತಿ ಮಂದಾನ 45, ರಿಚಾ ಘೋಷ್ 34ರನ್‌ಗಳ ಅವಶ್ಯಕ ಕೊಡುಗೆಯನ್ನು ನೀಡಿದರು. ದಕ್ಷಿಣ ಆಫ್ರಿಕಾದ ಅಬ್ಯೋಂಗ ಖಾಕಾ 3 ವಿಕೆಟ್‌ಗಳನ್ನು ಕಬಳಿಸಿದರು.

ಭಾರತದ ಸವಾಲಿನ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾಕ್ಕೆ ಬೆನ್ನುಲುಬಾಗಿದ್ದು ನಾಯಕಿ ಲಾರಾ ವೋಲ್ವಾರ್ಟ್. 98 ಎಸೆತಗಳಲ್ಲಿ 101 ರನ್‌ಗಳನ್ನು ಗಳಿಸಿ ಹೋರಾಟವನ್ನು ಪ್ರದರ್ಶಿಸಿದರೂ ತಂಡದ ಏಳನೇ ವಿಕೆಟ್ ರೂಪದಲ್ಲಿ ದೀಪ್ತಿ ಶರ್ಮ ಬಲೆಗೆ ಬಿದ್ದರು. ದ.ಆಫ್ರಿಕಾ ಪರವಾಗಿ ಡರ್ಕ್‌ಸೆನ್ (34) ಹೊರತಾಗಿ ಬೇರೆ ಯಾರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. 246ರನ್‌ಗಳಿಗೆ ಆಲೌಟ್ ಆಯಿತು.

ಭಾರತದ ಪರಾವಗಿ ದೀಪ್ತಿ ಶರ್ಮ 5 ಹಾಗೂ ಶಫಾಲಿ ವರ್ಮ 2 ವಿಕೆಟ್ ಕಿತ್ತು ಭಾರತದ ವಿಶ್ವಕಪ್ ಗೆಲ್ಲುವ ಕನಸನ್ನು ನನಸಾಗಿಸಿ, ಭಾರತದಲ್ಲಿ ವನಿತಾ ಕ್ರಿಕೆಟ್‌ನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದರು.

Post a Comment

Previous Post Next Post