Top News

ಕಲ್ಕೂರ ಪ್ರತಿಷ್ಠಾನದ 2026ರ ಸಾಂಪ್ರದಾಯಿಕ ಕ್ಯಾಲೆಂಡರ್‌ ಮಂತ್ರಾಲಯದಲ್ಲಿ ಅನಾವರಣ

ಮಂಗಳೂರು : ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಮಠದ ವೃಂದಾವನದ ಸಾನಿಧ್ಯದಲ್ಲಿ, ಶ್ರೀ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿಯವರು ಕಲ್ಕೂರ ಪ್ರತಿಷ್ಠಾನದಿಂದ ಮುದ್ರಿಸಲಾದ 2026ನೇ ಇಸವಿಯ ಸಾಂಪ್ರದಾಯಿಕ ಕ್ಯಾಲೆಂಡರನ್ನು ಇತ್ತೀಚೆಗೆ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರನ್ನು ಶಾಲು ಹೊದಿಸಿ ಸ್ವಾಮೀಜಿಯವರು ಗೌರವಿಸಿದರು. ಪ್ರತಿಷ್ಠಾನ ಕೈಗೊಂಡಿರುವ ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಮಾಜಮುಖಿ ಚಟುವಟಿಕೆಗಳ ಬಗ್ಗೆ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ಶ್ರೀನಿವಾಸ್ ಪ್ರಸಾದ್, ಯುಗಪುರುಷ ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ರಾಘವೇಂದ್ರ ಮಠದ ಅನಂತ ಆಚಾರ್ಯ, ಪ್ರತಿಷ್ಠಾನದ ವಿಶ್ವಸ್ಥ ಜನಾರ್ದನ ಹಂದೆ, ಅಶ್ವತ್ಥಾಮ ರಾವ್ ಹಾಗೂ ರಾಘವೇಂದ್ರ ಮಠದ ಆಡಳಿತಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Post a Comment

Previous Post Next Post