ಮಂಗಳೂರು: ಕುಂಜತ್ತಬೈಲ್‌ನ “ರಂಗ ಸ್ವರೂಪ (ರಿ)” ಸಂಘವು 2025-26ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.
ಕಳೆದ 20 ವರ್ಷಗಳಿಂದ “ರಂಗ ಸ್ವರೂಪ” ಸಂಸ್ಥೆ ಶೈಕ್ಷಣಿಕ, ಸಾಮಾಜಿಕ ಹಾಗೂ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ. ಸಂಸ್ಥೆ ಪರಿಸರ ಕಾಳಜಿಯೊಂದಿಗೆ ಸಾಮಾಜಿಕ ಸೇವೆ, ಶೈಕ್ಷಣಿಕ ಪ್ರಗತಿ, ವೈದ್ಯಕೀಯ ನೆರವು, ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳು, ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಸಕ್ರಿಯ ಪಾತ್ರ ವಹಿಸುತ್ತಿದೆ.
ಪ್ರತಿವರ್ಷ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ, ಅವರಿಗೆ “ರಂಗಸ್ವರೂಪ ಪ್ರಶಸ್ತಿ” ಪ್ರದಾನ ಮಾಡುವ ಮೂಲಕ ಸಾಧಕರನ್ನು ಪ್ರೋತ್ಸಾಹಿಸುವ ಕಾರ್ಯವೂ ಸಂಸ್ಥೆ ನಿರಂತರವಾಗಿ ಕೈಗೊಳ್ಳುತ್ತಿದೆ.
ಸಂಸ್ಥೆಯು ಕಳೆದ ಎರಡು ದಶಕಗಳಿಂದ ಮಾಡುತ್ತಿರುವ ಬಹುಮುಖ ಸೇವಾ ಚಟುವಟಿಕೆಗಳನ್ನು ಪರಿಗಣಿಸಿ, “ರಂಗ ಸ್ವರೂಪ (ರಿ) ಕುಂಜತ್ತಬೈಲ್” ಸಂಘಕ್ಕೆ 2025-26ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನವಾಗಿದೆ.
Post a Comment