Top News

ಭಾರತೀಯ ವೈದ್ಯಕೀಯ ಸಂಘದ ದ.ಕ. ಜಿಲ್ಲಾ ಶಾಖೆಯಿಂದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಗಾರ

ಮಂಗಳೂರು : ಭಾರತೀಯ ವೈದ್ಯಕೀಯ ಸಂಘ ದ.ಕ. ಜಿಲ್ಲಾ ಶಾಖೆಯ ಆಶ್ರಯದಲ್ಲಿ ಸದಸ್ಯರ ನಿರಂತರ ವೈದ್ಯಕೀಯ ಶಿಕ್ಷಣದ ಅಂಗವಾಗಿ ವೈದ್ಯಕೀಯ ಕಾರ್ಯಗಾರವು ಸಂಸ್ಥೆಯ ಅಧ್ಯಕ್ಷ ಡಾ. ಸದಾನಂದ ಪೂಜಾರಿಯವರ ನೇತ್ರತ್ವದಲ್ಲಿ ಇತ್ತೀಚೆಗೆ ನಗರದ ಹೊಟೇಲ್ ಓಶಿಯನ್ ಪಾರ್ಲ್ ಸಭಾಂಗಣದಲ್ಲಿ ಜರಗಿತು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನೆರೆದ ಗಣ್ಯರು, ಅತಿಥಿ, ಸದಸ್ಯರನ್ನು ಸ್ವಾಗತಿಸಿ ಸಭೆಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಂಗಳೂರು ನಗರ ಮೂಲದ ಎಸ್ಟರ್ ಆಸ್ಪತ್ರೆಯ ಅರ್ಭುದ ರೋಗ ಶಾಸ್ತ್ರ ವಿಭಾಗಿಯ ಮುಖ್ಯಸ್ಥ ಡಾ. ಸಿ. ಎನ್. ಪಾಟೀಲ್‌ ಪರಿಚಯ, ವೈದ್ಯಕೀಯ ವೃತ್ತಿ ಮತ್ತು ಶೈಕ್ಷಣಿಕ ಸಾಧನೆಗಳ ವಿವರ ನೀಡಿದರು.

ಡಾ. ಸಿ. ಎನ್. ಪಾಟೀಲ್‌ರವರು ತಮ್ಮ ಅತಿಥಿ ಉಪನ್ಯಾಸದಲ್ಲಿ ಖ್ಯಾತ ಸಾಹಿತಿ ಪ್ರಸಿದ್ಧ ಕವಿ ಡಿ. ವಿ. ಗುಂಡಪ್ಪರವರು ರಚಿಸಿದ ಕೃತಿ "ಮಂಕುತಿಮ್ಮ ಹೇಳಿದ ಜೀವನಗಳ ಸತ್ಯಗಳು" ಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಸಬಿಕರನ್ನು ರಂಜಿಸಿದರು ಮತ್ತು ಅದು ವೈದ್ಯಕೀಯ ವೃತ್ತಿ ಜೀವನಕ್ಕೆ ಹೇಗೆ ಅನ್ವಯಿಸುತ್ತದೆ ಎಂದು ಹೋಲಿಸಿದರು. ಮಾತ್ರವಲ್ಲದೆ ರೋಗಿಗಳು ವೈದ್ಯರ ಚಿಕಿತ್ಸಾಲಯಕ್ಕೆ ಸಲಹೆಗಾಗಿ ಭೇಟಿ ನೀಡಿದಾಗ ಅವರನ್ನು ಪೂರ್ಣ ಸಂತೃಪ್ತಿ ಪಡಿಸಬೇಕು ಅಲ್ಲದೆ ಯಾವ ಕಾರಣಕ್ಕೂ ಸಮಯದ ಅಭಾವ ಎಂದು ಕಾರಣ ನೀಡಿ ನಿರಾಸೆಗೊಳಿಸಬಾರದು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ ಮತ್ತು ಅಪ್ರತಿಮ ಸಾಧನೆಯನ್ನು ಪರಿಗಣಿಸಿ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘ ರಾಜ್ಯ ಶಾಖೆಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾ. ಅಣ್ಣಯ್ಯ ಕುಲಾಲ್ ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಸರ್ಕಾರಿ ವೆನ್‌ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಹಾಗೂ ಆಧೀಕ್ಷಕ ಡಾ. ಶಿವಪ್ರಕಾಶ್. ಏ.ಜೆ. ಆಸ್ಪತ್ರೆಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ, ವಿನಯ ಆಸ್ಪತ್ರೆಯ ನಿರ್ದೇಶಕ ಡಾ. ಹಂಸರಾಜ್ ಆಳ್ವ ಮತ್ತು ಸಂಘದ ಕೋಶಾಧಿಕಾರಿ ಡಾ. ಜೂಲಿಯನ್ ಸಲ್ದಾನ್ನ ಉಪಸ್ಥಿತರಿದ್ದರು.

ಡಾ. ಮಧುರಾ ಭಟ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಪ್ರಕಾಶ್ ಹರಿಶ್ಚಂದ್ರ ವಂದಿಸಿದರು. ಈ ಕಾರ್ಯಕ್ರಮವನ್ನು ಕಿಯೋಸೈನ್ಸ್ ಹೆಲ್ತ್ ಕೇರ್ ಸಂಸ್ಥೆ ಹಾಗೂ ಲೂಪಿನ್ ಫಾರ್ಮಸಿಟಿಕಲ್ಸ್ ಸಂಸ್ಥೆ ಪ್ರಾಯೋಜಿಸಿತ್ತು.

Post a Comment

Previous Post Next Post