ವಾಷಿಂಗ್ಟನ್: ಮೆಕೋರ್ ಎಂಬ ಕೃತಕ ಬುದ್ದಿಮತ್ತೆ ನವೋದ್ಯಮವನ್ನು ರೂಪಿಸಿದ ಕನ್ನಡಿಗ ಆದರ್ಶ್ ಹಿರೇಮಠ (22) ವಿಶ್ವದ ಅತಿ ಕಿರಿಯ 'ಸೆಲ್ಫ್ಮೇಡ್ ಬಿಲಿಯನೇರ್ (1 ಶತಕೋಟಿ ಡಾಲರ್)' ಎಂದೆನಿಸಿಕೊಂಡಿದ್ದಾರೆ.
23ನೇ ವಯಸ್ಸಿನಲ್ಲಿ ಇಷ್ಟು ಹಣ ಸಂಪಾದನೆ ಮಾಡಿ ಇದೇ ಪಟ್ಟದಲ್ಲಿ ವಿರಾಜಮಾನರಾಗಿದ್ದ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರನ್ನು ಆದರ್ಶ್ ಮೀರಿಸಿದ್ದು, ಅವರ ನೇತೃತ್ವದ ನವೋದ್ಯಮ 10 ಶತಕೋಟಿ ಡಾಲರ್ ಮೌಲ್ಯವನ್ನು ಗಳಿಸಿದೆ. .
ಅಮೆರಿಕದಲ್ಲೇ ಹುಟ್ಟಿ ಬೆಳೆದವರಾದರೂ ಆದರ್ಶ್ ಅವರ ಪೋಷಕರು ಕನ್ನಡಿಗರು, ಹಾರ್ವರ್ಡ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿರೇಮಠ್, ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲಿಲ್ಲ. 2 ವರ್ಷಗಳ ಹಿಂದೆ ತಮ್ಮ ಸ್ನೇಹಿತರಾದ ಸೂರ್ಯ ಮಿಧಾ ಮತ್ತು ಬ್ರೆಂನ್ ಪೂಡಿ ಜತೆ ಸೇರಿ ಮೆಕೋರ್ ಎಂಬ ನವೋದ್ಯಮ ಆರಂಭಿಸಿದರು.
9 ತಿಂಗಳಲ್ಲೇ ಈ ಕಂಪನಿ 89 ಕೋಟಿ ರೂ. ಆದಾಯ ಗಳಿಸಿತು. ಇನ್ನು 2025ರ ಜೂನ್‌ನಲ್ಲಿ ಮೆಟಾ ಕಂಪನಿಯು ಮೆರ್‌ಕೋರ್ ಕಂಪನಿಯಲ್ಲಿನ 1.2 ಲಕ್ಷ ಕೋಟಿ ರೂ. ಬೆಲೆಯ ಶೇ.49ರಷ್ಟು ಷೇರುಗಳನ್ನು ಖರೀದಿಸಿದ ಬಳಿಕ ಕಂಪನಿಯ ಮಾರುಕಟ್ಟೆ ಮೌಲ್ಯ ಮತ್ತಷ್ಟು ಏರಿಕೆಯಾಗಿತ್ತು. ಈ ನಡುವೆ ಈ ನವೋದ್ಯಮ ತನ್ನ ಸೇವಾ ವಿಸ್ತರಣೆಗಾಗಿ ಮಾರುಕಟ್ಟೆಯಿಂದ 3 ಲಕ್ಷ ಕೋಟಿ ರೂ. ಬಂಡವಾಳ ಸಂಗ್ರಹಿಸಿದೆ. ಇದರ ಬಳಿಕ ಕಂಪನಿಯ ಮಾರುಕಟ್ಟೆ ಮೌಲ್ಯ ಇನ್ನಷ್ಟು ಹೆಚ್ಚಾಗಿದೆ. ಸಿಲಿಕಾನ್ ವ್ಯಾಲಿಯಲ್ಲೇ ಬೆಳೆದ ನಾನು ಚಿಕ್ಕಂದಿನಿಂದಲೇ ಟೆಕಿಗಳ ಸ್ನೇಹದಲ್ಲಿ ಬೆಳೆದೆ. ನನ್ನ ಆಸಕ್ತಿ ಸಂಪೂರ್ಣವಾಗಿ ಅತ್ತ ಹೊರಳಿತು. ಸಮಾನ ಮನಸ್ಕರೊಂದಿಗೆ ಸಮಾಲೋಚನೆ ನಡೆಸಿ ಹೊಸ ಸಾಹಸಕ್ಕೆ ಕೈ ಹಾಕಿದೆವು. ಇದರಲ್ಲಿ ಯಶಸ್ಸನ್ನು ಸಾಧಿಸಿದ್ದೇವೆ,'' ಎಂದಿದ್ದಾರೆ.
Post a Comment