ಬೆಂಗಳೂರು : ತುಳು ಹೋರಾಟಗಾರ, ಕಂಬಳ ಸಂಘಟಕರು, ತುಳುಕೂಟ ಬೆಂಗಳೂರು ಘಟಕದ ಅಧ್ಯಕ್ಷರೂ ಆಗಿದ್ದಂತಹ ಕೆದಂಬಾಡಿ ಗ್ರಾಮದ ಕುಕ್ಕುಂಜೋಡು ನಿವಾಸಿ ಸುಂದರ್ ರಾಜ್ ರೈ(55) ಅವರು ತಮ್ಮ ಬೆಂಗಳೂರಿನ ನಿವಾಸಲ್ಲಿ ಗುರುವಾರ(ಅ.23) ಹೃದಯಾಘಾತದಿಂದ ನಿಧನ ಹೊಂದಿದರು.
ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ರಾಜ್ಯ ರಾಜಧಾನಿಯಲ್ಲಿ ಪ್ರಥಮ ಬಾರಿಗೆ ನಡೆದ ಬೆಂಗಳೂರು ಕಂಬಳದ ಸಂಘಟನೆಯಲ್ಲಿ ಸಕ್ರಿಯವಾಗಿದ್ದರು.
ಹಬ್ಬಕ್ಕೆ ಊರಿಗೆ ಬಂದವರು ಬುಧವಾರ ಬೆಂಗಳೂರಿಗೆ ವಾಪಾಸ್ ತೆರಳಿದ್ದರು. ಅ.23ರ ಮಧ್ಯಾಹ್ನ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ. ಅವರಿಗೆ ಪತ್ನಿ, ಪುತ್ರಿ, ಸಹೋದರ, ಸಹೋದರಿಯರು ಇದ್ದಾರೆ.
Post a Comment