ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾತಿ ನಿಂದನೆ ಮತ್ತು ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಕಾಪಿಗುಡ್ಡ ಕಾವೂರು ನಿವಾಸಿ ನಿಖಿಲ್ ರಾಜ್ (27) ಬಂಧಿತನಾಗಿದ್ದಾನೆ.
ಅ.18ರಂದು ದಾಖಲಾಗಿದ್ದ ಪ್ರಕರಣ (ಅ.ಕ್ರ.146/2025) ತನಿಖೆಯಲ್ಲಿ, ಕಾರ್ಕಳ ನಿಟ್ಟೆ ಗ್ರಾಮದ ಅಭಿಷೇಕ್ ಆಚಾರ್ಯ ದೂರುದಾರರ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, ಆತ್ಮಹತ್ಯೆಗೆ ಮೊದಲು ಕಳುಹಿಸಿದ ಚಿತ್ರಗಳು ಮತ್ತು ಸಂದೇಶಗಳು ಪ್ರಕರಣಕ್ಕೆ ಸಂಬಂಧಿಸಿದ್ದು ದೃಢಪಟ್ಟಿವೆ.
ತನಿಖೆಯಲ್ಲಿ ನಿಖಿಲ್ ರಾಜ್ ಜಾತಿ ನಿಂದನೆಯ ಶಬ್ದ ಬಳಸಿರುವುದು ದೃಢವಾದ ಹಿನ್ನೆಲೆಯಲ್ಲಿ, ಮಂಗಳೂರು ಕೇಂದ್ರ ಉಪ ವಿಭಾಗದ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಅವರ ನೇತೃತ್ವದಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಆರೋಪಿಯ ಮೊಬೈಲ್ ಫೋನ್ ವಶಪಡಿಸಿಕೊಂಡು ಮುಂದಿನ ತನಿಖೆ ಮುಂದುವರಿಸಲಾಗಿದೆ.
Post a Comment