ಕನಕಪುರ, ಅ.17:ಸರಿಗಮಪ ಖ್ಯಾತಿಯ ಪ್ರತಿಭಾವಂತ ಗಾಯಕಿ ಸುಹಾನಾ ಸೈಯದ್ ಅವರು ಶುಕ್ರವಾರ ತಮ್ಮ ಬಹುಕಾಲದ ಸ್ನೇಹಿತ ನಿತಿನ್ ಶಿವಾಂಶ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕನಕಪುರದ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಈ ಸುಂದರ ವಿವಾಹ ಸಮಾರಂಭವು ಆಪ್ತ ಬಂಧು–ಬಳಗದ ಸಮ್ಮುಖದಲ್ಲಿ ಕುವೆಂಪು ಅವರ ‘ಮಂತ್ರ ಮಾಂಗಲ್ಯ’ ಆಶಯದಂತೆ ಸರಳವಾಗಿ ನೆರವೇರಿತು. ಹಾರ ಬದಲಾಯಿಸಿದ ಕ್ಷಣದಲ್ಲಿ ಸುಹಾನಾ ಭಾವುಕರಾದರು.
ಸಾಗರ ಮೂಲದ ಸುಹಾನಾ, ಸರಿಗಮಪ ವೇದಿಕೆಯ ಮೂಲಕ ಖ್ಯಾತಿ ಗಳಿಸುವುದರ ಜೊತೆಗೆ ಭಕ್ತಿ ಗೀತೆಗಳ ಗಾಯನದಲ್ಲಿಯೂ ಜನಮನ ಗೆದ್ದಿದ್ದಾರೆ. ತಮ್ಮ ಕಲಾತ್ಮಕ ಪ್ರಯಾಣದ ವೇಳೆ ಕೆಲ ವಿರೋಧಗಳನ್ನೂ ಎದುರಿಸಿದ್ದರೂ ಅದನ್ನು ಧೈರ್ಯದಿಂದ ಎದುರಿಸಿದ್ದಾರೆ.
ನಿತಿನ್ ಶಿವಾಂಶ್, ರಂಗಭೂಮಿ ಮತ್ತು ಸಿನಿ ಕಲಾವಿದರಾಗಿದ್ದು, ಇವರಿಬ್ಬರ ಸ್ನೇಹವು 16 ವರ್ಷಗಳ ಪೈಪೋಟಿಯ ಬಳಿಕ ಪ್ರೀತಿಯ ರೂಪ ಪಡೆದಿದೆ.
ವಿವಾಹ ಆಹ್ವಾನ ಪತ್ರಿಕೆಯಲ್ಲಿ,
"ಪ್ರೀತಿ ವಿಶ್ವದ ಭಾಷೆ. ಹೃದಯದಿಂದ ಹೊರಹೊಮ್ಮಿದ ಈ ಪ್ರೇಮಕಾವ್ಯ ದೇವ ವಿರಚಿತ. ಶ್ರೀ ಕುವೆಂಪು ಅವರ ಮಂತ್ರಮಾಂಗಲ್ಯದ ಆಶಯದಂತೆ ಜೊತೆಯಾಗಲಿರುವ ಸುಹಾನಾ ಹಾಗೂ ನಿತಿನ್ – ನಮ್ಮ ನಡೆ ವಿಶ್ವಮಾನವತ್ವದ ದಾರಿಗೆ. ಸಹೃದಯಿಗಳೇ, ಬನ್ನಿ ಹರಸಿ, ಆಶೀರ್ವದಿಸಿ"
ಎಂದು ಉಲ್ಲೇಖಿಸಿದ್ದು ವಿಶೇಷ ಗಮನ ಸೆಳೆದಿತ್ತು.
Post a Comment