Top News

NelliTheertha | ಅ.17ರಂದು ನೆಲ್ಲಿತೀರ್ಥ ಗುಹಾ ಪ್ರವೇಶ ಹಾಗೂ ತೀರ್ಥ ಸ್ನಾನ ಆರಂಭ

ಮಂಗಳೂರು : ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದ ಗುಹಾ ಪ್ರವೇಶ ಹಾಗೂ ತೀರ್ಥ ಸ್ನಾನವು ಅ.17ರಿಂದ ಆರಂಭಗೊಳ್ಳಲಿದೆ.

ಜಾಬಾಲಿ ಮಹರ್ಷಿಯ ತಪೋವನವೆಂದೇ ಪ್ರಸಿದ್ಧಿ ಪಡೆದಿರುವ ತುಳುನಾಡಿನ ಗುಹಾಲಯ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರನ ಸನ್ನಿಧಿಯಲ್ಲಿ ಅ.17ನೇ ಶುಕ್ರವಾರ ತುಲಾ ಸಂಕ್ರಮಣದಂದು ಗುಹಾಪ್ರವೇಶ - ತೀರ್ಥಸ್ನಾನ ದೇವತಾ ಪ್ರಾರ್ಥನೆಯೊಂದಿಗೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಸಮ್ಮುಖದಲ್ಲಿ ಪ್ರಾರಂಭಗೊಳ್ಳಲಿದೆ.

ಈ ಸಂದರ್ಭದಲ್ಲಿ ಕಟೀಲು ಶ್ರೀ ಕ್ಷೇತ್ರದ ಲಕ್ಷ್ಮೀ ನಾರಾಯಣ ಆಸ್ರಣ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಭುವನಾಭಿರಾಮ ಉಡುಪ ಯುಗಪುರುಷ, ಶ್ರೀಪತಿ ಭಟ್ ಧನಲಕ್ಷ್ಮೀ ಕ್ಯಾಶವ್ ಇಂಡಿಸ್ಟ್ರೀಸ್ ಮೂಡಬಿದಿರೆ,  ರಾಜಗೋಪಾಲ ಆರ್ಚಾಯ ಕೋಟೇಶ್ವರ ಮೊದಲಾದವರು ಉಪಸ್ಥಿತರಿರುವರು.

ಮಧ್ಯಾಹ್ನ ಸಾಮೂಹಿಕ ಶನಿಪೂಜೆ, ಮಹಾಪೂಜೆ, ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Post a Comment

Previous Post Next Post