Top News

ಖಾಸಗಿ ವಿಡಿಯೋ ಮುಂದಿಟ್ಟು ಸ್ನೇಹಿತರಿಂದಲೇ ಬ್ಲ್ಯಾಕ್ಮೇಲ್ ; ಡೆತ್ ನೋಟು ಬರೆದಿಟ್ಟು ಯುವಕ ಆತ್ಮಹತ್ಯೆ ! ಡೆತ್ ನೋಟ್‌ನಲ್ಲಿ ಏನಿದೆ ಗೊತ್ತಾ ?


ಹುಡುಗಿಯ ಜೊತೆಗಿನ ತನ್ನ ಖಾಸಗಿ ವಿಡಿಯೋವನ್ನು ಬಳಸಿ ಬ್ಲಾಕ್ಮೇಲ್ ಮಾಡುತ್ತಿದ್ದ ಸ್ನೇಹಿತರಿಗೆ ಹೆದರಿ ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್‌ನ ಲಾಡ್ಜ್ ‌ನಲ್ಲಿ ನಡೆದಿದೆ.

ಬೆಳ್ಮಣ್ ನಲ್ಲಿರುವ ಲಾಡ್ಜ್ ನಲ್ಲಿ ಅಭಿಷೇಕ್ ಆಚಾರ್ಯ (23) ಎಂಬ ಯುವಕ ಸಾವಿಗೆ ಶರಣಾಗಿದ್ದು,  ಅ.9ರ ಗುರುವಾರ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಭಿಷೇಕ್ ಮಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದು ಈ ವೇಳೆ ಸ್ಥಳೀಯ ಹುಡುಗಿಯೊಂದಿಗೆ ಸ್ನೇಹದಲ್ಲಿದ್ದ. ಇವರು ಜೊತೆಗಿದ್ದಾಗ ತಮ್ಮದೇ ವಿಡಿಯೋ ಮಾಡಿಕೊಂಡಿದ್ದರು ಎನ್ನಲಾಗುತ್ತಿದ್ದು, ಅದು ಅಭಿಷೇಕ್ ಸ್ನೇಹಿತರಿಗೆ ಸಿಕ್ಕಿತ್ತು.
ಜಾಲತಾಣದಲ್ಲಿ ವಿಡಿಯೋ ಹರಿಯ ಬಿಡುತ್ತೇವೆ ಎಂದು ಹೇಳಿ ಬೆದರಿಕೆ ಹಾಕಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ಯುವಕ ಡೆತ್ ನೋಟ್ ಬರೆದಿಟ್ಟು ಅದರಲ್ಲಿ ಹುಡುಗಿಯ ಹೆಸರೂ ಸೇರಿದಂತೆ ಬ್ಲಾಕ್ಮೇಲ್ ಮಾಡಿದ್ದ ನಾಲ್ವರ ಹೆಸರನ್ನೂ ಬರೆದಿಟ್ಟಿದ್ದಾನೆ. ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಡೆತ್ ನೋಟ್ ಮತ್ತು ಆತನ ಮೊಬೈಲನ್ನು ವಶಕ್ಕೆ ಪಡೆದಿದ್ದಾರೆ. ಮೊಬೈಲ್‌ ತಪಾಸಣೆ ಬಳಿಕ ಸಾವಿನ ಹಿಂದಿನ ಕಾರಣ ಸಿಗಬಹುದೆಂದು ಪೊಲೀಸರು ತಿಳಿಸಿದ್ದಾರೆ.

Post a Comment

Previous Post Next Post