
ದಕ್ಷಿಣ ಭಾರತದಲ್ಲಿ ಪ್ರಮುಖ ಉಪಹಾರ ತಿಂಡಿಗಳಲ್ಲಿ ಒಂದಾದ ಇಡ್ಲಿ ಯಾರಿಗೆ ಇಷ್ಟವಿಲ್ಲ ಹೇಳಿ ? ಇಂದು (ಅ.11) ಅದೇ ಇಡ್ಲಿಗೆ ಗೂಗಲ್ ಡೂಡಲ್‌ನಲ್ಲಿ ಗೌರವ ಸಲ್ಲಿಸಿದೆ.
ಇಡ್ಲಿ ಕೇವಲ ತಿಂಡಿಯಾಗಿರದೆ ಸಂಸ್ಕೃತಿ ಹಾಗೂ ಸಂಪ್ರದಾಯದ ಪ್ರತೀಕವಾಗಿಯೂ ಗುರುತಿಸಲ್ಪಟ್ಟಿದೆ. ದಕ್ಷಿಣ ಭಾರತದ ಎಲ್ಲೆಡೆ ಇಡ್ಲಿ ಒಂದು ಪ್ರಮುಖ ಉಪಹಾರವಾಗಿದ್ದು, ಬೇರೆ ಬೇರೆ ರೂಪಗಳಲ್ಲಿ ಪರಿವರ್ತನೆಯನ್ನೂ ಹೊಂದಿದೆ.
'ಸೆಲೆಬ್ರೆಟಿಂಗ್ ಇಡ್ಲಿ' ಟೈಟಲ್‌ನಲ್ಲಿ ಡೂಡಲ್ ಇಡ್ಲಿ ತಯಾರಿಯ ಹಂತಗಳನ್ನು ಆಕರ್ಷಕವಾಗಿ ಪ್ರಸ್ತುತಪಡಿಸಿದೆ.
Post a Comment