ಬಿಹಾರ: ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಮತ್ತು ಅದರ ಮೈತ್ರಿ ಪಕ್ಷಗಳು ಅವಮಾನಕರ ಸೋಲು ಅನುಭವಿಸಿದ ನಂತರ ಬಿಹಾರದಲ್ಲಿ ನ.14ರಂದು ನಿಜವಾದ ದೀಪಾವಳಿ ಆಚರಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಬಿಹಾರದ ಸಿವಾನ್‌ನಲ್ಲಿ ನಡೆದ ಚುನಾವಣಾ ರ‌್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, “ಲಾಲು ಪ್ರಸಾದ್ ಹಾಗೂ ರಾಬ್ರಿ ದೇಬಿ ಅವರು 20ಕ್ಕೂ ಹೆಚ್ಚು ವರ್ಷಗಳಿಂದ ಸಿವಾನ್‌ನ ಜನರ ಮೇಲೆ ‘ಜಂಗಲ್ ರಾಜ್’ ಹೇರಿಕೆ ಮಾಡಿದ್ದಾರೆ. ಈಗ ಕ್ರಿಮಿನಲ್ ಹಿನ್ನಲೆಯುಳ್ಳ ಮೊಹಮ್ಮದ್ ಶಹಾಬುದ್ದೀನ್ ಅವರ ಮಗ ಒಸಾಮಾ ಸಾಹಬ್‌ಗೆ ರಘುನಾಥಪುರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಬೇಕು” ಎಂದು ಜನರನ್ನು ಕರೆ ನೀಡಿದರು.
ಅವರು ಮುಂದುವರೆದು, “‘ಇಂಡಿಯಾ’ ಮೈತ್ರಿಕೂಟ ಬಿಹಾರದಲ್ಲಿ ಸಂಪೂರ್ಣವಾಗಿ ಛಿದ್ರಗೊಂಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಮತ ಅಧಿಕಾರ ಯಾತ್ರೆ’ ವೇಳೆ ಒಳನುಸುಳುಕೋರರ ಬಗ್ಗೆ ಹೇಳಿದ್ದರು. ಆದರೆ ಬಿಹಾರದಲ್ಲಿ ಒಬ್ಬನೇ ಒಬ್ಬ ಒಳನುಸುಳುಕೋರನಿಗೂ ಅವಕಾಶ ನೀಡುವುದಿಲ್ಲ” ಎಂದರು.
ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ನವೆಂಬರ್ 14ರಂದು ಘೋಷಣೆಯಾಗಲಿವೆ.
Post a Comment