ಮಂಗಳೂರು : ಪಿಲಿನಲಿಕೆ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಮಿಥುನ್ ಎಂ.ರೈ ಹಾಗೂ ನಮ್ಮ ಟಿವಿ ಸಹಯೋಗದಲ್ಲಿ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಬುಧವಾರ ನಡೆದ 10ನೇ ವರ್ಷದ ಪಿಲಿನಲಿಕೆ ಪಂಥದಲ್ಲಿ ಪುರಲ‌್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ ಪ್ರಥಮ ಬಹುಮಾನವನ್ನು ಪಡೆಯಿತು.
ಪೊಳಲಿ ತಂಡ ಪ್ರಥಮ ಬಹುಮಾನದ ರೂಪದಲ್ಲಿ 10ಲಕ್ಷ ರೂ. ನಗದು ಬಹುಮಾನವನ್ನು ಪಡೆದುಕೊಂಡಿತು.
ಸೋಮೇಶ್ವರ ಫ್ರೆಂಡ್ಸ್ ಸರ್ಕಲ್ ಹಾಗೂ ಗೋರಕ್ಷನಾಥ ಟೈಗರ್ಸ್ ಜೆಪ್ಪು ದ್ವಿತೀಯ ಬಹುಮಾನ ಪಡೆದರೆ, ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್ ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿತು.
Social Plugin