ನಮ್ಮ ವಾಟ್ಸಾಪ್ ಗುಂಪು ಸೇರಲು ಕ್ಲಿಕ್ ಮಾಡಿ

ಸೆ.29ರಿಂದ ಅ.1ರವರೆಗೆ ಬಜಪೆ ಶ್ರೀ ಶಾರದೋತ್ಸವ; ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಬಜಪೆ ಕೇಂದ್ರ ಮೈದಾನದ “ಶ್ರೀ ಶಕ್ತಿ ಮಂಟಪ” ದಲ್ಲಿ 33ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಸೆಪ್ಟೆಂಬರ್ 29ರಿಂದ ಅಕ್ಟೋಬರ್ 1ರವರೆಗೆ ವೈಭವದಿಂದ ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಲೋಕೇಶ್ ಪೂಜಾರಿ ತಿಳಿಸಿದ್ದಾರೆ.

ಶಿಬರೂರು ಶ್ರೀ ಅನಂತ ಪದ್ಮನಾಭ ಆಚಾರ್ಯರ ಪೌರೋಹಿತ್ಯದಲ್ಲಿ ಉತ್ಸವದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳಿಗೆ ವಿಶೇಷ ಪೂಜೆ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳ ವ್ಯವಸ್ಥೆ ಮಾಡಲಾಗಿದೆ. ವಿದ್ಯಾಮಾತೆ ಶ್ರೀ ಶಾರದಾಂಬೆಯ ಕೃಪಾಕಟಾಕ್ಷವನ್ನು ಪಡೆಯುವ ಅವಕಾಶವನ್ನು ಬಳಸಿಕೊಳ್ಳಲು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಿರಿಮುಡಿ ಗಂಧ–ಪ್ರಸಾದವನ್ನು ಸ್ವೀಕರಿಸಿ, ತನು–ಮನ–ಧನಗಳಿಂದ ಸಹಕರಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಶಾರದೋತ್ಸವ ಸಮಿತಿ ಮನವಿ ಮಾಡಿದೆ.


ಬಜಪೆ ಶ್ರೀ ಶಾರದೋತ್ಸವ ಸಮಿತಿಯ 33ನೇ ವರ್ಷದ ನೂತನ ಪದಾಧಿಕಾರಿಗಳನ್ನು ಪ್ರಕಟಿಸಲಾಗಿದೆ. ಅಧ್ಯಕ್ಷರಾಗಿ ಶ್ರೀ ಲೋಕೇಶ್ ಪೂಜಾರಿ ಬಜಪೆ ಅವರನ್ನು ಆಯ್ಕೆ ಮಾಡಲಾಗಿದೆ. ಗೌರವ ಅಧ್ಯಕ್ಷರಾಗಿ ಗೋಪಾಲ ಸುವರ್ಣ ಮುರನಗರ, ಬಾಬು ಕುಂದರ್, ಸುರೇಂದ್ರ ಪೆರ್ಗಡೆ, ಮಧು ಕುಲಾಲ್ ಅವರನ್ನು ಆಯ್ಕೆ ಮಾಡಲಾಗಿದೆ. 

ಕಾರ್ಯಾಧ್ಯಕ್ಷರಾಗಿ ರೋಹಿತ್ ತಾರಿಕಂಬ್ಳ, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣರಾಜ್ ಶಾಂತಿನಗರ, ಕೋಶಾಧಿಕಾರಿಯಾಗಿ ದುರ್ಗಾಪ್ರಸಾದ್ ಮಡಿವಾಳ ಧೂಮಾವತಿಧಾಮ
ಉಪಾಧ್ಯಕ್ಷರುಗಳಾಗಿ ಭುಜಂಗ ಕುಲಾಲ್ ಅದ್ಯಪಾಡಿ, ಯಾದವ ಬೆಳ್ಳಡ ಧೂಮಾವತಿಧಾಮ, ಸುನಿಲ್ ಸುವರ್ಣ ಸುಂಕದಕಟ್ಟೆ, ಶಂಕರದಾಸ್ ಮೆಣ್ಗಲಪದವು ಆಯ್ಕೆಗೊಂಡಿದ್ದಾರೆ. ಸಂಘಟನಾ ಕಾರ್ಯದರ್ಶಿಯಾಗಿ ಪ್ರದೀಪ್ ಸುವರ್ಣ ಧೂಮಾವತಿಧಾಮ, ಜತೆ ಕೋಶಾಧಿಕಾರಿಗಳಾಗಿ ಯೋಗೀಶ್ ಸುವರ್ಣ ಬಜಪೆ, ಜಯದಾಸ್ ಮೆಣ್ಣಲಪದವು, 
ಜತೆ ಕಾರ್ಯದರ್ಶಿಗಳಾಗಿ ಅನಿಲ್ ಕುಮಾರ್ ಸುಂಕದಕಟ್ಟೆ, ಸುರೇಶ್ ಬೆಳ್ಳಡ ಸುಂಕದಕಟ್ಟೆ
ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಅಶೋಕ್ ಕುಮಾರ್ ಬಜಪೆ, ಗಣೇಶ್ ಕುಮಾರ್ ಸ್ವಾಮಿಲಪದವು ಆಯ್ಕೆಗೊಂಡಿದ್ದಾರೆ.
Previous Post Next Post