ನಮ್ಮ ವಾಟ್ಸಾಪ್ ಗುಂಪು ಸೇರಲು ಕ್ಲಿಕ್ ಮಾಡಿ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ರಸ್ತೆಯ ಪರಿಸ್ಥಿತಿ ಇದು.! ಮರವೂರು ಸೇತುವೆ - ಮರಕಡ ನಡುವಿನ ರಸ್ತೆಗೆ ಗತಿ ಯಾರು ಸ್ವಾಮಿ ?

ಮಂಗಳೂರು ನಗರಕ್ಕೆ ಪ್ರವೇಶದ್ವಾರದಂತಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಮರವೂರು ಸೇತುವೆಯಿಂದ ಮರಕಡದವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಈ ರಸ್ತೆಯಲ್ಲಿ ಸಂಚರಿಸುವುದೇ ತ್ರಾಸದಾಯವಾಗಿದೆ.
ರಸ್ತೆಯೂ ಬೃಹತ್ ಹೊಂಡಗುಂಡಿಗಳಿಂದ ತುಂಬಿ ಹೋಗಿದ್ದು, ದ್ವಿಚಕ್ರ ವಾಹನ ಸವಾರರು ಇಲ್ಲಿರುವ ಗುಂಡಿಗಳನ್ನು ತಪ್ಪಿಸಿಕೊಂಡು ಹೋಗುವುದೇ ದೊಡ್ಡ ಸವಾಲಗಿದೆ. ಕಳೆದ ಹಲವಾರು ವರ್ಷಗಳಿಂದ ಹೀಗೆ ಇದ್ದರೂ ಶಾಶ್ವತ ಪರಿಹಾರವನ್ನು ಇನ್ನೂ ಒದಗಿಸದೇ ಇರುವುದು ಸ್ಥಳೀಯ ಶಾಸಕರು ಹಾಗೂ ಸಂಸದರ ಕಾರ್ಯತತ್ಪರತೆಯ ಬಗ್ಗೆ ಪ್ರಶ್ನೆಯನ್ನು ಎಬ್ಬಿಸಿದೆ.
ಮಳೆಗಾಲ ಮುಗಿದ ಬಳಿಕ ಕಾಮಗಾರಿ ನಡೆಯುತ್ತದೆ ಎಂದು ಹೇಳಲಾಗುತ್ತಿದೆ ಆದರೆ ಈಗ ಈ ರಸ್ತೆಯನ್ನೇ ಅವಲಂಬಿಸಿರುವ ಸಾವಿರಾರು ಮಂದಿಯ ಜೀವದೊಂದಿಗೆ ಚೆಲ್ಲಾಟವಾಡುವುದು ಏಕೆ ? ಕನಿಷ್ಠ ಬೃಹತ್ ಹೊಂಡಗಳನ್ನಾದರೂ ಮುಚ್ಚಿಸುವ ಪುಣ್ಯದ ಕೆಲಸವನ್ನು ಜನಪ್ರತಿನಿಧಿಗಳು ಮಾಡಿಸಲಿ ಎನ್ನುತ್ತಾರೆ ಸ್ಥಳೀಯರು.
ರಾಜ್ಯ ಅಥವಾ ರಾಷ್ಟ್ರೀಯ ವಿವಿಐಪಿಗಳು ಬರುವ ಸಂದರ್ಭದಲ್ಲಿ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ ಆದರೆ ಜನಸಾಮಾನ್ಯರ ಓಡಾಟಕ್ಕೆ ತೊಂದರೆಯಾಗುತ್ತಿರುವಾಗ ಕಣ್ಣುಮುಚ್ಚಿ ಕುಳಿತಿರುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗಳ ಕಣ್ಣಾಮುಚ್ಚಾಲೆ ಅಟಕ್ಕೆ ಸಾಕ್ಷಿಯಾಗಿ ಉಳಿದಂತೆ ಭಾಸವಾಗುತ್ತಿದೆ.
Previous Post Next Post