Top News

ಒಂದು ಗೇಣು ಮಲ್ಲಿಗೆ ಹೂವಿನಿಂದಾಗಿ 1.14 ಲಕ್ಷ ರೂ. ದಂಡ ತೆತ್ತ ನಟಿ ನವ್ಯಾ ನಾಯರ್‌ !!

ಕ್ಯಾನ್‌ಬೆರಾ: ಮಲ್ಲಿಗೆ ಹೂಗಳನ್ನು ಕೈಚೀಲದಲ್ಲಿ ಕೊಂಡೊಯ್ದ ಕಾರಣಕ್ಕೆ ಆಸ್ಟ್ರೇಲಿಯಾದ ಮೆಲ್ಬರ್ನ್ ವಿಮಾನ ನಿಲ್ದಾಣದಲ್ಲಿ 1.14 ಲಕ್ಷ ರೂ. ದಂಡ ಪಾವತಿಸಬೇಕಾಯಿತು ಎಂದು ನಟಿ ನವ್ಯಾ ನಾಯರ್ ತಿಳಿಸಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಈ ವಿಷಯವನ್ನು ಅವರು ಬಹಿರಂಗಪಡಿಸಿದರು. “ನಾನು ಕೇವಲ ಒಂದು ಗೇಣು ಮಲ್ಲಿಗೆ ಹೂವು ಜೊತೆಗಿಟ್ಟಿದ್ದೆ. ಆದರೆ ಸ್ಥಳೀಯ ನಿಯಮಾವಳಿ ಪ್ರಕಾರ ಅದನ್ನು ಉಲ್ಲಂಘನೆ ಎಂದು ಪರಿಗಣಿಸಿ ದಂಡ ವಿಧಿಸಲಾಯಿತು” ಎಂದು ಅವರು ಹೇಳಿದರು.

ಆಸ್ಟ್ರೇಲಿಯಾದ ಕಠಿಣ ಕಾನೂನು ಪ್ರಕಾರ, ಕೀಟಗಳು ಹಾಗೂ ರೋಗಕಾರಕಗಳಿಂದ ಉಂಟಾಗುವ ಜೈವಿಕ ಅಪಾಯವನ್ನು ತಡೆಗಟ್ಟುವ ಉದ್ದೇಶದಿಂದ ಯಾವುದೇ ಸಸ್ಯದ ಭಾಗ, ಹೂ, ಹಣ್ಣು ಅಥವಾ ಬೀಜಗಳನ್ನು ವಿದೇಶಗಳಿಂದ ತರಲು ಪೂರ್ವಭಾವಿಯಾಗಿ ಮಾಹಿತಿ ನೀಡುವುದು ಕಡ್ಡಾಯವಾಗಿದೆ.

Post a Comment

Previous Post Next Post