ನಮ್ಮ ವಾಟ್ಸಾಪ್ ಗುಂಪು ಸೇರಲು ಕ್ಲಿಕ್ ಮಾಡಿ

ಮಂಗಳೂರಿನಲ್ಲಿ ಅ.1ರಂದು ಪಿಲಿನಲಿಕೆ –10 ಭರ್ಜರಿ ಸ್ಪರ್ಧೆ ; ₹26 ಲಕ್ಷದ ಬಹುಮಾನ, ಬಾಲಿವುಡ್–ಸ್ಯಾಂಡಲ್‌ವುಡ್ ತಾರೆಯರೂ ಭಾಗಿ

ಮಂಗಳೂರು : ಪಿಲಿನಲಿಕೆ ಪ್ರತಿಷ್ಠಾನ (ರಿ.) ಮಂಗಳೂರಿನ ಆಶ್ರಯದಲ್ಲಿ ಹಾಗೂ ನಮ್ಮ ಟಿವಿಯ ಸಹಭಾಗಿತ್ವದಲ್ಲಿ “ಪಿಲಿನಲಿಕೆ–10” ಹುಲಿವೇಷ ಸ್ಪರ್ಧೆ ಅಕ್ಟೋಬರ್ 1ರಂದು ಮಂಗಳಾ ಕ್ರೀಡಾಂಗಣದ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10ರವರೆಗೆ ಜರುಗಲಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ.
ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ತುಳುನಾಡಿನ ಸಾಂಪ್ರದಾಯಿಕ ಹುಲಿವೇಷ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಆರಂಭವಾದ ಪಿಲಿನಲಿಕೆ ಸ್ಪರ್ಧೆ ಈಗಾಗಲೇ ಒಂಭತ್ತು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದೆ. ಹತ್ತನೇ ಆವೃತ್ತಿ ಭರ್ಜರಿಯಾಗಿ ನಡೆಯಲಿದ್ದು, ಈ ಬಾರಿ ಜಿಲ್ಲೆಯ ಪ್ರತಿಷ್ಠಿತ 10 ಆಹ್ವಾನಿತ ತಂಡಗಳು ಪಾಲ್ಗೊಳ್ಳಲಿವೆ ಎಂದರು.

ಬಹುಮಾನಗಳು
ಈ ಬಾರಿಯ ಸ್ಪರ್ಧೆಯಲ್ಲಿ ಒಟ್ಟು ₹26 ಲಕ್ಷ ಬಹುಮಾನ ನಿಗದಿಪಡಿಸಲಾಗಿದೆ.
ಪ್ರಥಮ ಬಹುಮಾನ: ₹10,00,000 ಹಾಗೂ ಫಲಕ
ದ್ವಿತೀಯ ಬಹುಮಾನ: ₹5,00,000 ಹಾಗೂ ಫಲಕ
ತೃತೀಯ ಬಹುಮಾನ: ₹3,00,000 ಹಾಗೂ ಫಲಕ

ಪ್ರತಿ ತಂಡಕ್ಕೂ ₹50,000 ಗೌರವ ಧನವನ್ನು ನೀಡಲಾಗುವುದು

ವೈಯಕ್ತಿಕ ವಿಭಾಗಗಳಲ್ಲಿ (ಮರಿಹುಲಿ, ಕರಿಹುಲಿ, ತಾಸೆ, ಮುಡಿ ಹಾರಿಸುವುದು, ಬಣ್ಣಗಾರಿಕೆ, ಅತ್ಯುತ್ತಮ ಕುಣಿತ) ತಲಾ ₹50,000 ಬಹುಮಾನ ನೀಡಲಾಗುವುದು.


ವಿಶೇಷತೆಗಳು
25 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿಗೆ ಆಸನ ವ್ಯವಸ್ಥೆ.
ಪ್ರತಿ ತಂಡಕ್ಕೆ 20 ನಿಮಿಷಗಳ ಪ್ರದರ್ಶನ ಅವಧಿ.
ಈ ಬಾರಿ ಹೊಸ ತಂಡಗಳಿಗೂ ಅವಕಾಶ.
ದಶಮಾನೋತ್ಸವದ ಅಂಗವಾಗಿ ಪ್ರತಿಷ್ಠಾನವು ಮೂಡುಬಿದಿರೆಯ ಒಂದು ಸರ್ಕಾರಿ ಶಾಲೆಯನ್ನು ದತ್ತು ಸ್ವೀಕರಿಸಲು ನಿರ್ಧರಿಸಿದೆ.

ಅತಿಥಿಗಳ ಆಗಮನ
ಕಾರ್ಯಕ್ರಮಕ್ಕೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ರಾಜ್ಯಸಭಾ ಸದಸ್ಯ ನಸೀರ್ ಹುಸೇನ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಸಂಸದರು, ಶಾಸಕರು ಭಾಗವಹಿಸಲಿದ್ದಾರೆ. ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಗುವುದು.

ಸೆಲೆಬ್ರಿಟಿಗಳ ಹಾಜರಿ
ಕಾರ್ಯಕ್ರಮಕ್ಕೆ ಬಾಲಿವುಡ್ ನಟ ಸುನೀಲ್ ಶೆಟ್ಟಿ, ಸ್ಯಾಂಡಲ್‌ವುಡ್ ತಾರೆಯರಾದ ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಹಾಗೂ ಕ್ರಿಕೆಟ್ ದಿಗ್ಗಜರು ಹಾಜರಾಗಿ ತಾರಾ ಮೆರುಗನ್ನು ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು

ಪತ್ರಿಕಾಗೋಷ್ಠಿಯಲ್ಲಿ ಡಾ. ಶಿವಶರಣ್ ಶೆಟ್ಟಿ, ನವೀನ್ ಶೆಟ್ಟಿ, ವಿಕಾಸ್, ಅವಿನಾಶ್ ಹಾಗೂ ನವೀನ್ ಶೆಟ್ಟಿ ಎಡ್ಮೇಮಾರ್ ಉಪಸ್ಥಿತರಿದ್ದರು.
Previous Post Next Post