ಮಂಗಳೂರು : ತಮಿಳುನಾಡಿನ ಚೆನ್ನೈ ಯಲ್ಲಿ ಭಾರತ ಸರ್ಕಾರ ಮತ್ತು ಭಾರತ ಕ್ರೀಡಾ ಪ್ರಾಧಿಕಾರದ ಮಾನ್ಯತೆಯನ್ನು ಪಡೆದ ಕಿಕ್ ಬಾಕ್ಸಿಂಗ್ ಕ್ರೀಡೆಯಾ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಎಂಡ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ವಿದ್ಯಾರ್ಥಿಗಳು 3 ಚಿನ್ನದ ಪದಕ(ಅತೀಶ್ ಎಸ್ ಶೆಟ್ಟಿ ಮತ್ತು ದಿತಿಕ ಜೆ.ಕೆ) 7ಬೆಳ್ಳಿಯ ಪದಕ( ದಿಶಿಕ ಜೆ.ಕೆ, ಆದ್ಯ ಕಿಶೋರ್, ಅತೀಶ್ ಎಸ್ ಶೆಟ್ಟಿ, ಆರುಶ್ ಬಂಗೇರಾ ಅವೀಶ್ ಎಸ್ ಶೆಟ್ಟಿ ಮತ್ತು ಪ್ರಕೃತಿ ಮಿಸ್ಕ ಭಟ್) ಮತ್ತು 3ಕಂಚಿನ ಪದಕಗಳನ್ನು (ಮನ್ವಿತ್ ಕೆ ಎಲ್, ಆದ್ಯ ಎ ಮತ್ತು ಪ್ರಕೃತಿ ಮಿಸ್ಕ ಭಟ್) ಪಡೆದು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ಈ ವಿದ್ಯಾರ್ಥಿಗಳು ಸಂಸ್ಥೆಯ ಮುಖ್ಯ ಶಿಕ್ಷಕರಾದ ನಿತಿನ್ ಸುವರ್ಣ ಮತ್ತು ಶಿಕ್ಷಕರಾದ ಸಂಪತ್ ಕುಮಾರ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ 3 ಚಿನ್ನ ಸೇರಿ 13 ಪದಕಗಳನ್ನು ಗೆದ್ದ ಜಿಲ್ಲೆಯ ಪಟುಗಳು
MoolaDhwani