ಮಂಗಳೂರು : ಪಾಂಡೇಶ್ವರದಲ್ಲಿರುವ ಫಿಝಾ ಬೈ ನೆಕ್ಸಸ್ ಮಾಲ್ ಹಾಗೂ ಮಂಗಳೂರಿನ ಪ್ರಸಿದ್ಧ ಟ್ರೈ ತಿಂಡಿ ಇನ್‌ಸ್ಟಾಗ್ರಾಂ ಪೇಜ್ ಸಹಭಾಗಿತ್ವದಲ್ಲಿ ಜನವರಿ 16, 17 ಮತ್ತು 18ರಂದು ಐಸ್‌ಕ್ರೀಮ್ ಪರ್ಬ ಆಯೋಜಿಸಲಾಗಿದೆ.
ಇದು 3ನೇ ಆವೃತ್ತಿಯ ಐಸ್‌ಕ್ರೀಮ್ ಪರ್ಬವಾಗಿದ್ದು, ಮೂರೂ ದಿನಗಳೂ ಬೆಳಗ್ಗೆ 11ರಿಂದ ರಾತ್ರಿ 9ರವರೆಗೆ ನಡೆಯಲಿದೆ ಎಂದು ಆಯೋಜಕರಾದ ಕಿರಣ್ ಶೆಣೈ ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.
ಮಂಗಳೂರನ್ನು ‘ಐಸ್‌ಕ್ರೀಮ್ ಕ್ಯಾಪಿಟಲ್ ಆಫ್ ಇಂಡಿಯಾ’ ಎಂದು ಕರೆಯುವ ಸಂದರ್ಭದಲ್ಲಿ, ಎಲ್ಲಾ ಐಸ್‌ಕ್ರೀಮ್ ಸಂಸ್ಥೆಗಳನ್ನು ಒಂದೇ ಸೂರಿನಡಿ ತರಬೇಕೆಂಬ ಉದ್ದೇಶದಿಂದ ಈ ಪರ್ಬ ಆಯೋಜಿಸಲಾಗಿದ್ದು, ಈ ಬಾರಿ ಒಟ್ಟು 17 ಐಸ್‌ಕ್ರೀಮ್ ಸಂಸ್ಥೆಗಳು ಭಾಗವಹಿಸುತ್ತಿವೆ ಎಂದರು.
ಐಡಿಯಲ್–ಪಬ್ಬಾಸ್, ಹ್ಯಾಂಗ್ಯೋ ಸೇರಿದಂತೆ ಮಂಗಳೂರಿನ ಹಲವು ಪ್ರಸಿದ್ಧ ಬ್ರ್ಯಾಂಡ್‌ಗಳ ಐಸ್‌ಕ್ರೀಮ್ ಕಂಪೆನಿಗಳು ಪಾಲ್ಗೊಳ್ಳಲಿದ್ದು, ಪಟ್ಟೋಡಿ ಐಸ್‌ಕ್ರೀಮ್ ಈ ಬಾರಿಯ ವಿಶೇಷ ಆಕರ್ಷಣೆಯಾಗಿರಲಿದೆ ಎಂದು ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಆರ್‌ಜೆ ಅಭಿಷೇಕ್ ಉಪಸ್ಥಿತರಿದ್ದರು.
Post a Comment