ಮಂಗಳೂರು: ತಮ್ಮ ವಿಶಿಷ್ಟ ಶೈಲಿಯ ಬೈಗುಳಗಳಿಂದ ಇನ್ಸಾಗ್ರಾಮ್‌ನಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ನಾಗುರಿ ನಿವಾಸಿ ಆಶಾ ಪಂಡಿತ್ ಅವರು ಇಂದು ನಸುಕಿನ ಜಾವ ಹೃದಯಾಘಾತದಿಂದ ನಿಧನರಾದರು.
ಇನ್ಸಾಗ್ರಾಮ್‌ನಲ್ಲಿ ಚಿತ್ರವಿಚಿತ್ರ ಬೈಗುಳಗಳ ಮೂಲಕ ಹವಾ ಸೃಷ್ಟಿಸಿದ್ದ ಆಶಾ ಪಂಡಿತ್ ಪಡೀಲ್ ಬಳಿ ಪುಟ್ಟ ಗೂಡಂಗಡಿಯನ್ನು ನಡೆಸುತ್ತಿದ್ದರು. ಕುಟುಂಬ ಮೂಲಗಳ ಮಾಹಿತಿ ಪ್ರಕಾರ, ನಿನ್ನೆ ರಾತ್ರಿ ಅವರಿಗೆ ವಾಂತಿ ಉಂಟಾಗಿದ್ದು, ಇಂದು ನಸುಕಿನ ಜಾವ ಹೃದಯಾಘಾತಕ್ಕೆ ತುತ್ತಾಗಿ ಮನೆಯ ಅಂಗಳದಲ್ಲಿ ಬಿದ್ದಿದ್ದಾರೆ.
ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅವರ ಅಕಾಲಿಕ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
Post a Comment