Top News

"ಕೆಲವರು ವೇಷವನ್ನೇ ದೈವ ಅಂದ್ಕೊಂಡಿದ್ದಾರೆ, ತುಳುನಾಡಿಗೆ ಬನ್ನಿ ದೈವ ಏನೆಂದು ನಾವು ತೋರಿಸಿ ಕೊಡ್ತೇವೆ !": ಹೊಸ ಅಲೆ ಸೃಷ್ಟಿಸುತ್ತಿರುವ ಕಟ್ಟೆಮಾರ್ ಟ್ರೈಲರ್

ಗಣೇಶ್ ಎನ್. ಆಚಾರ್ಯ
ganesh@mooladhwani.in
ಅಸ್ತ್ರ ಪ್ರೊಡಕ್ಷನ್ ಪ್ರಸ್ತುತಪಡಿಸುತ್ತಿರುವ ಕಟ್ಟೆಮಾರ್ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದ್ದು, ಕೋಸ್ಟಲ್‌ವುಡ್ ಸಿನಿ ಪ್ರೇಮಿಗಳ ಮನಸ್ಸಿನಲ್ಲಿ ಹೊಸ ಅಲೆಯನ್ನು ಎಬ್ಬಿಸಿದೆ.
ರಕ್ಷಿತ್ ಗಾಣಿಗ ಹಾಗೂ ಸಚಿನ್ ಕಟ್ಲ ನಿರ್ದೇಶನದ ಕಟ್ಟೆಮಾರ್ ಸಿನಿಮಾ ಯುವಕರ ಪವರ್ ‌ಫುಲ್ ಟೀಮ್ ಎಫರ್ಟ್‌ನಿಂದ ಮೂಡಿ ಬಂದಿದ್ದು, ಸ್ವರಾಜ್ ಶೆಟ್ಟಿ ಹಾಗೂ ನಿರ್ಮಾಪಕರೂ ಆಗಿರುವ ಲಂಚುಲಾಲ್ ಮತ್ತು ಜೆಪಿ ತುಮ್ಮಿನಾಡು ಮುಖ್ಯ ಭೂಮಿಕೆಯಲ್ಲಿದ್ದಾರೆ, ಈ ಸಿನಿಮಾ ತುಳು ನಾಡಿನ ಸತ್ಯ ಶಕ್ತಿಯ ಕಾರಣಿಕವನ್ನು ಸಾದರಪಡಿಸುವ ಕಥಾ ಹಂದರ ಹೊಂದಿರುವುದನ್ನು ನಾವು ಟ್ರೈಲರ್‌ನಲ್ಲಿ ಕಾಣಬಹುದಾಗಿದೆ.

ಡಿಓಪಿ ಸಂತೋಷ್ ಆಚಾರ್ಯ ಗುಂಪಲಾಜೆ ಹಾಗೂ ಎಡಿಟರ್ ಗಣೇಶ್ ನಿರ್ಚಾಲ್ ಜೋಡಿ ಮತ್ತೊಮ್ಮೆ ದೃಶ್ಯಗಳನ್ನು ಮನಮೋಹಕಗೊಳಿಸಿದ್ದು, ಕಣ್ಣಿಗೆ ಪ್ರತಿಯೊಂದು ಫ್ರೇಮ್ ಕೂಡ ಹಬ್ಬವಾಗಿದೆ.

ಉತ್ಸಾಹಿ ಯುವಕರ ತಂಡ :
ಕಟ್ಟೆಮಾರ್ ಸಿನಿಮಾ ಹೊಸ ಪೀಳಿಗೆಯ ಯುವಕರು ಕಟ್ಟಿದ ಸಿನಿಮಾವಾಗಿದ್ದು, ಈಗ ಬಿಡುಗಡೆ ಹೊಂದಿರುವ ಟ್ರೈಲರ್ ಕೋಸ್ಟಲ್‌ವುಡ್‌ಗೆ ಹೊಸ ಭಾಷ್ಯ ಬರೆಯುವ ನಿರೀಕ್ಷೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ವಿಶ್ವಾಸ್ ಅಡ್ಯಾರ್, ಆರ್.ಕೆ.ಮುಲ್ಕಿ, ವಿನೋದ್ ಶೆಟ್ಟಿ ಕೃಷ್ಣಾಪುರ, ಸಂದೇಶ್ ಉಕ್ಕುಡ ನಿರ್ದೇಶನ ತಂಡದಲ್ಲಿದ್ದು, ಈ ಮ್ಯಾಜಿಕಲ್ ಮೂವಿಯ ರಚನೆಯಲ್ಲಿ ತಮ್ಮ ಅಮೋಘ ಕೊಡುಗೆಯನ್ನು ನೀಡಿದ್ದಾರೆ. ರಿತೇಶ್ ಕಟ್ಲಾ ಕಲಾ ನಿರ್ದೇಶಕರಾಗಿದ್ದು, ಕಾರ್ತಿಕ್ ಮುಲ್ಕಿ ಸಿನಿಮಾಕ್ಕೆ ಸಂಗೀತವನ್ನು ನೀಡಿದ್ದಾರೆ.

ಆಕರ್ಷಕ ಸಂಭಾಷಣೆಗಳು :
ಟ್ರೈಲರ್‌ನಲ್ಲಿರುವ ಡೈಲಾಗ್‌ಗಳು ಕೂಡ ಅಮೋಘವಾಗಿದ್ದು, 'ಕಣ್ಣುರಿಯುಂಡು ಪಂದ್ ಅಡಿಗೆ ಆಪಿನೆರ್ದ್ ದುಂಬು ತೂ ತೆಕ್ಕೆಯೆರೆ ಆಪುಂಡ' (ಕಣ್ಣು ಉರಿಯುತ್ತದೆಂದು ಅಡುಗೆ ಆಗುವ ಮೊದಲೇ ಬೆಂಕಿ ನಂದಿಸಲು ಆಗುತ್ತದೆಯೆ ?), ದೈವನೇ ಒಂಜಿ ಕಟ್ಟ್ ಕಥೆ ಪನ್ಪಿನೆಕ್ ಸತ್ಯದ ಗೋಚರ ಆಪುಂಡು (ದೈವವನ್ನೇ ಕಟ್ಟು ಕಥೆ ಅಂತ ಹೇಳುವುದಕ್ಕೆ ಸತ್ಯದ ಗೋಚರ ಆಗುತ್ತದೆ ), ಹಾಗೂ 'ಕೆಲವರು ವೇಷವನ್ನೇ ದೈವ ಅಂದ್ಕೊಂಡಿದ್ದಾರೆ. ಪುರಸೊತ್ತಿದ್ದರೆ ಒಂದು ಸರಿ ತುಳುನಾಡಿಗೆ ಬನ್ನಿ ಆಯ್ತ ದೈವ ಏನು ಅಂತ ನಾವು ತೋರಿಸಿಕೊಡ್ತೇವೆ ಅನ್ನುವ ಸಂಭಾಷಣೆ ಕಟ್ಟೆಮಾರ್ ಸಿನಿಮಾ ಟ್ರೈಲರನ್ನು ಮತ್ತಷ್ಟು ರೋಚಕಗೊಳಿಸುತ್ತದೆ.

ದೈವಗಳ ವೇಷವನ್ನು ವಿಡಿಯೋಗಳಲ್ಲಿ ನೋಡಿ ವೇಷವನ್ನೇ ದೈವ ಅಂದುಕೊಂಡ ತುಳುನಾಡಿನಾಚೆಗಿನ ಜನರು ನಿಜವಾದ ದೈವದ ಕಾರಣಿಕ ಏನು ಎಂದು ತುಳುನಾಡಿಗೆ ಬಂದು ತಿಳಿದುಕೊಳ್ಳಿ ಎನ್ನುವುದನ್ನು ಸೂಚ್ಯವಾಗಿ ಹೇಳಿರುವ ಕಟ್ಟೆಮಾರ್ ಸಿನಿಮಾದ ಟ್ರೈಲರ್ ಮತ್ತಷ್ಟು ಜನರ ಮನಸ್ಸನ್ನು ತಲುಪುವುದರಲ್ಲಿ ಯಾವುದೇ ಸಂದೇಹವಿಲ್ಲ. !

ಒಟ್ಟಿನಲ್ಲಿ ತುಳು ಸಿನಿಮಾ ರಂಗ ಪಲ್ಲಟದ ಹೊಸ್ತಿಲಲ್ಲಿ ಇದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನಷ್ಟು ಈ ರೀತಿಯ ನೆಲ ಮೂಲದ ಕಥಾ ಹಂದರ ಹೊಂದಿರುವ ಸಿನಿಮಾಗಳು ತುಳು ಭಾಷೆಯಲ್ಲಿ ಮೂಡಿ ಬರಲಿ ಎನ್ನುವುದು ಮೂಲಧ್ವನಿಯ ಆಶಯ.

Post a Comment

Previous Post Next Post