ಇದಕ್ಕೆ ಸೆಡ್ಡು ಹೊಡೆಯುವಂತೆ, “ಮುಂದಿನ ದಿನಗಳಲ್ಲಿ ಸರಕಾರವೇ ಬಂಗಾರವನ್ನು ಬ್ಯಾನ್ ಮಾಡಿಬಿಟ್ಟರೆ ಹೇಗೆ ? ಎನ್ನುವ ಯೋಚನೆಯಲ್ಲಿ ವ್ಯಂಗ್ಯ ಚರ್ಚೆಗಳು ಕೆಲ ಕಡೆಗಳಲ್ಲಿ ನಡೆಯುತ್ತಿವೆ.
ಅದರಲ್ಲೂ ಒಂದು ಕಾಲ್ಪನಿಕ ಕಾನೂನು ಹೆಚ್ಚು ಗಮನ ಸೆಳೆದಿದೆ. ಅದರ ಶೀರ್ಷಿಕೆ ಕೇಳಿದಾಗಲೇ ಶಾಕ್ ಆಗುತ್ತದೆ…
“ಭಾರತದಲ್ಲಿ ಬಂಗಾರ ಬ್ಯಾನ್!”
ಭಾರತದಲ್ಲಿ ಬಂಗಾರವೆಂದರೆ ಕೇವಲ ಲೋಹವಲ್ಲ…
ಅದು ಪರಂಪರೆ, ಗೌರವ, ಭದ್ರತೆ, ಭಾವನೆ ಮತ್ತು ಆರ್ಥಿಕ ಶಕ್ತಿ ಕೂಡ.
ಮದುವೆ, ನಾಮಕರಣ, ಸೀಮಂತ, ಹಬ್ಬ-ಹರಿದಿನ, ದೇವಾಲಯದ ಕಾಣಿಕೆ—
ಎಲ್ಲಕ್ಕೂ ಬಂಗಾರವೇ ಪ್ರಮುಖವಾಗಿರುವಾಗ, ಅದನ್ನೇ ಬ್ಯಾನ್ ಮಾಡಿದರೆ ಪರಿಸ್ಥಿತಿ ಹೇಗಿರಬಹುದು?
ಕಾಲ್ಪನಿಕ ಕಾನೂನು: ಬಂಗಾರ ಹೊಂದಿದ್ದರೆ ಶಿಕ್ಷೆಗಳು
ಈ ಕಲ್ಪನೆಯ ಪ್ರಕಾರ ಬಂಗಾರ ಹೊಂದಿರುವುದೇ ಅಪರಾಧ ಆಗಿಬಿಡುತ್ತದೆ.
1kg ಗಿಂತ ಹೆಚ್ಚು ಬಂಗಾರ ಇದ್ದರೆ – ಗಲ್ಲುಶಿಕ್ಷೆ
500g ಗಿಂತ ಹೆಚ್ಚು ಇದ್ದರೆ – ಜೀವಾವಧಿ ಶಿಕ್ಷೆ
100g ಗಿಂತ ಹೆಚ್ಚು ಇದ್ದರೆ – 25 ವರ್ಷ ಜೈಲು
50g ಗಿಂತ ಹೆಚ್ಚು ಇದ್ದರೆ – 15 ವರ್ಷ ಜೈಲು
10g ಗಿಂತ ಹೆಚ್ಚು ಇದ್ದರೆ – 5 ವರ್ಷ ಜೈಲು
10g ಗಿಂತ ಕಡಿಮೆ ಇದ್ದರೆ – ₹1 ಲಕ್ಷ ದಂಡ + 1 ವರ್ಷ ಜೈಲು
ಇಂತಹ ಕಾನೂನು ಬಂದರೆ ಜನರಲ್ಲಿ ಭಯ ಹೆಚ್ಚಾಗಿ, ಬಂಗಾರವನ್ನು “ಸಂಗ್ರಹಿಸುವುದು” ಅಲ್ಲ “ಮರೆಮಾಚುವುದು” ಆರಂಭವಾಗಬಹುದು.
ಕೇವಲ ಹಾಸ್ಯಕ್ಕಾಗಿ ಈ ಬರಹ...
Post a Comment