Top News

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಎಂಡಿಎಂಎ ಮಾದಕ ಜಾಲ ಭೇದಿಸಿದ ಪೊಲೀಸರು ; ನಾಲ್ವರು ಆರೋಪಿಗಳ ಬಂಧನ, ಎರಡು ಕಾರುಗಳ ವಶ

ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ ಹಾಗೂ ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಎಂಡಿಎಂಎ ಮಾದಕ ವಸ್ತು ಸೇವನೆ ಹಾಗೂ ಮಾರಾಟ ನಡೆಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿ, ಮಾದಕ ವಸ್ತುಗಳು ಸೇರಿದಂತೆ ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರನ್ನು ಪುತ್ತೂರು ನಿವಾಸಿಗಳಾದ ಮೊಹಮ್ಮದ್ ಹರ್ಷದ್ (33), ಮಹಮ್ಮದ್ ಆರೀಶ್ (31), ಇಬ್ರಾಹಿಂ ಅಶ್ರಫ್ ಅಲಿಯಾಸ್ ರೋಜಾ ಅಶ್ರಫ್ (46) ಹಾಗೂ ಆರೋಪಿಗಳಿಗೆ ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಬಂಟ್ವಾಳ ನಿವಾಸಿ ಮುಸ್ತಾಫ (46) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಅಂದಾಜು ರೂ.50,000 ಮೌಲ್ಯದ 6.39 ಗ್ರಾಂ ಎಂಡಿಎಂಎ, 0.87 ಗ್ರಾಂ ಗಾಂಜಾ, ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಅಂದಾಜು ರೂ.6 ಲಕ್ಷ ಮೌಲ್ಯದ ಎರಡು ಕಾರುಗಳು ಸೇರಿದಂತೆ ಇತರೆ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ ರೂ.6.50 ಲಕ್ಷವಾಗಿದೆ.
ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಿನಾಂಕ 24-01-2026ರಂದು ಅ.ಕ್ರ.ನಂ.13/2026ರಂತೆ NDPS ಕಾಯ್ದೆ ಕಲಂ 8(c), 21(b) ಹಾಗೂ Arms Act ಕಲಂ 25(1B)(B) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ಗುಣಪಾಲ ಜೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕಿ ಸುಶ್ಮಾ ಭಂಡಾರಿ ಹಾಗೂ ಸಿಬ್ಬಂದಿಗಳಾದ ಮುರುಗೇಶ್ ಪರಮೇಶ್ವರ, ಸತೀಶ್, ಸುಬ್ರಹ್ಮಣ್ಯ, ಹರೀಶ್, ನಾಗೇಶ್, ಭವಿತ್ ರೈ, ವಿನೋದ್, ನಾಗರಾಜ್, ಕಾರ್ತಿಕ್ ಸೇರಿದಂತೆ ವಿಶೇಷ ತಂಡದ ಅದ್ರಾಮ್, ಪ್ರಶಾಂತ ಎಂ., ಪ್ರವೀಣ್ ರೈ, ಪ್ರಶಾಂತ್ ರೈ, ಹರ್ಷಿತ್, ಸಂಪತ್ ಹಾಗೂ ಸೋಕೋ ತಂಡದವರು ಭಾಗವಹಿಸಿದ್ದರು.

Post a Comment

Previous Post Next Post