ರಾಜ್ಯಸಭಾ ಸಂಸದೆ ಹಾಗೂ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಡಾ. ಪಿ.ಟಿ. ಉಷಾ ಅವರ ಪತಿ ವಿ. ಶ್ರೀನಿವಾಸನ್ (64) ಇಂದು ಶುಕ್ರವಾರ ನಸುಕಿನ ಜಾವ ನಿಧನರಾದರು
ತಿಕ್ಕೋಡಿ ಪೆರುಮಾಳ್‌ಪುರಂನ ತಮ್ಮ ನಿವಾಸದಲ್ಲಿ ಮಧ್ಯರಾತ್ರಿ ಸುಮಾರು 1 ಗಂಟೆಗೆ ಅವರು ಕುಸಿದು ಬಿದ್ದಿದ್ದು, ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆಯ ಸಮಯದಲ್ಲಿ ಡಾ. ಪಿ.ಟಿ. ಉಷಾ ಮನೆಯಲ್ಲಿ ಇರಲಿಲ್ಲ. ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸಲು ದೆಹಲಿಯಲ್ಲಿದ್ದ ಅವರು ಸುದ್ದಿ ತಿಳಿದ ತಕ್ಷಣ ಸ್ವಗ್ರಾಮಕ್ಕೆ ತೆರಳಿದ್ದಾರೆ.
ಶ್ರೀನಿವಾಸನ್ ಪೊನ್ನಾನಿಯ ಕುಟ್ಟಿಕ್ಕಾಡ್‌ನಲ್ಲಿರುವ ವೆಂಗಲಿ ಥರಾವದ್‌ನ ನಾರಾಯಣನ್ ಹಾಗೂ ಸರೋಜಿನಿ ದಂಪತಿಯ ಪುತ್ರರಾಗಿದ್ದು, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ (CISF) ನಿವೃತ್ತ ಡೆಪ್ಯೂಟಿ ಎಸ್‌ಪಿ ಆಗಿದ್ದರು. 1991ರಲ್ಲಿ ತಮ್ಮ ದೂರದ ಸಂಬಂಧಿ ಪಿ.ಟಿ. ಉಷಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಡಾ. ಉಜ್ವಲ್ ವಿಘ್ನೇಶ್ ಎಂಬ ಪುತ್ರನಿದ್ದಾರೆ.
Post a Comment