ಮಂಗಳೂರು: ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ನಡೆದ 9ನೇ ವರ್ಷದ ಮಂಗಳೂರು ಕಂಬಳ ಸ್ಪರ್ಧೆ ಭರ್ಜರಿ ಪೈಪೋಟಿ, ಸಂಭ್ರಮ ಹಾಗೂ ಜನಸಾಗರದ ನಡುವೆ ಯಶಸ್ವಿಯಾಗಿ ನೆರವೇರಿತು. ಅಡ್ಡ ಹಲಗೆ, ಹಗ್ಗ ಹಿರಿಯ–ಕಿರಿಯ ಹಾಗೂ ನೇಗಿಲು ಹಿರಿಯ–ಕಿರಿಯ ವಿಭಾಗಗಳಲ್ಲಿ ಸ್ಪರ್ಧಿಗಳು ತಮ್ಮ ಕೌಶಲ್ಯ ಪ್ರದರ್ಶಿಸಿದರು. ವಿವಿಧ ವಿಭಾಗಗಳ ಫಲಿತಾಂಶ ಈ ಕೆಳಕಂಡಂತಿದೆ.
ಅಡ್ಡ ಹಲಗೆ ವಿಭಾಗ:
ಪ್ರಥಮ ಸ್ಥಾನವನ್ನು ಇರುವೈಲು ದೊಡ್ಡಗುತ್ತು ಜಗದೀಶ್ ಎಂ. ಶೆಟ್ಟಿ “ಎ” (11.68 ಸೆಕೆಂಡ್) ಪಡೆದುಕೊಂಡರು. ಈ ಓಟದಲ್ಲಿ ತೆಕ್ಕಟ್ಟೆ ಸುಧೀರ್ ದೇವಾಡಿಗ ಹಲಗೆ ಮುಟ್ಟಿದರು.
ದ್ವಿತೀಯ ಸ್ಥಾನವನ್ನು ನಾರ್ಯ ಗುತ್ತು ಕುವೆತ್ತಬೈಲು ಸಂತೋಷ್ ರೈ, ಬೋಳ್ಯಾರು (11.83 ಸೆಕೆಂಡ್) ಗಳಿಸಿದರು. ಬೈಂದೂರು ಮಹೇಶ್ ಪೂಜಾರಿ ಹಲಗೆ ಮುಟ್ಟಿದರು.
ಹಗ್ಗ ಹಿರಿಯ ವಿಭಾಗ:
ಪ್ರಥಮ ಸ್ಥಾನ ಕೊಳಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್ (11.41 ಸೆಕೆಂಡ್) ಅವರಿಗೆ ಲಭಿಸಿತು. ಈ ಓಟವನ್ನು ಕಕ್ಕೇಪದವು ಪೆರಂಗಾಲು ಕೃತಿಕ ಗೌಡ ನಡೆಸಿದರು.
ದ್ವಿತೀಯ ಸ್ಥಾನವನ್ನು ನಲ್ಲೂರು ಬಜಗೋಳಿ ಶಿವಪ್ರಸಾದ್ ನಿಲಯದ ಪ್ರಾಣೇಶ್ ದಿನೇಶ್ ಭಂಡಾರಿ “ಎ” ಪಡೆದುಕೊಂಡರು. ಬೈಂದೂರು ವಿಶ್ವನಾಥ ದೇವಾಡಿಗ ಓಡಿಸಿದರು.
ಹಗ್ಗ ಕಿರಿಯ ವಿಭಾಗ:
ಪ್ರಥಮ ಸ್ಥಾನ ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ “ಬಿ” (11.41 ಸೆಕೆಂಡ್) ಅವರಿಗೆ ಸಿಕ್ಕಿತು. ಮಂಗಲ್ಪಾಡಿ ರಕ್ಷಿತ್ ಶೆಟ್ಟಿ ಓಡಿಸಿದರು.
ದ್ವಿತೀಯ ಸ್ಥಾನವನ್ನು ಎರ್ಮಾಳ್ ಡಾ. ಚಿಂತನ್ ರೋಹಿತ್ ಹೆಗ್ಡೆ (11.62 ಸೆಕೆಂಡ್) ಪಡೆದರು. ಮಿಜಾರ್ ಅಶ್ವಥಪುರ ಶ್ರೀನಿವಾಸ ಗೌಡ ಓಡಿಸಿದರು.
ನೇಗಿಲು ಹಿರಿಯ ವಿಭಾಗ:
ಪ್ರಥಮ ಸ್ಥಾನವನ್ನು ಎಂಬತ್ತು ಬಡಗಬೆಟ್ಟು ಕಲ್ಪಾಪು ಶ್ರೀಕ ಸಂದೀಪ್ ಶೆಟ್ಟಿ (10.87 ಸೆಕೆಂಡ್) ಗಳಿಸಿದರು. ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್ ಓಡಿಸಿದರು. ಇದು ದಾಖಲೆಯ ಓಟವಾಗಿದೆ.
ದ್ವಿತೀಯ ಸ್ಥಾನ ಮಂಗಳೂರು ಮರಕಡ ಬಾಯಾಡಿ ಮನೆ ಶಾಂತ ಸಂಜಯ್ ಶೆಟ್ಟಿ “ಎ” (11.44 ಸೆಕೆಂಡ್) ಅವರಿಗೆ ಲಭಿಸಿತು. ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ ಓಡಿಸಿದರು.
ನೇಗಿಲು ಕಿರಿಯ ವಿಭಾಗ:
ಪ್ರಥಮ ಸ್ಥಾನ ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ “ಬಿ” (11.56 ಸೆಕೆಂಡ್) ಅವರಿಗೆ ದೊರಕಿತು. ಕಾವೂರುದೋಟ ಸುದರ್ಶನ್ ಓಡಿಸಿದರು.
ದ್ವಿತೀಯ ಸ್ಥಾನವನ್ನು ಮುಲ್ಕಿ ಚಿತ್ರಾಪು ಸಾನದಮನೆ ಅಂಬಿಕಾ ರವೀಂದ್ರ ಪೂಜಾರಿ (11.74 ಸೆಕೆಂಡ್) ಪಡೆದರು. ಬಾರಾಡಿ ಸತೀಶ್ ಸಫಲಿಗ ಓಡಿಸಿದರು.
ಕಂಬಳ ಕ್ರೀಡೋತ್ಸವವು ತುಳುನಾಡಿನ ಸಂಪ್ರದಾಯ, ಸಂಸ್ಕೃತಿ ಮತ್ತು ಕ್ರೀಡಾ ಪರಂಪರೆಯನ್ನು ಮತ್ತೊಮ್ಮೆ ಜೀವಂತಗೊಳಿಸಿತು. ಸಾವಿರಾರು ಮಂದಿ ಪ್ರೇಕ್ಷಕರು ಕಂಬಳದ ರೋಮಾಂಚನಕಾರಿ ಕ್ಷಣಗಳಿಗೆ ಸಾಕ್ಷಿಯಾದರು.
Post a Comment