ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಯು.ಪಿ.ಓ.ಆರ್ ಮಂಗಳೂರಿನಲ್ಲಿ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಪಿರ್ಯಾದಿದಾರರ ಬಾಕಿ ಸಂಬಳದ ಬಿಲ್ ಮಾಡಿಕೊಡಲು ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ಮುಂದುವರಿಸಲು ನೇಮಕಾತಿ ಆದೇಶ ಮಾಡಿಕೊಡಲು ಸಾವಿರಾರು ರೂಪಾಯಿ ಲಂಚದ ಹಣ ಬೇಡಿಕೆಯಿಟ್ಟಿದ್ದ ಭೂದಾಖಲೆ ಇಲಾಖೆಯ ಮೂವರು ಅಧಿಕಾರಿಗಳು ಮಂಗಳೂರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಈ ದಿನ ಬೆಳಕಿಗೆ ಬಂದಿದೆ.
ಉಳ್ಳಾಲ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿ ಸರ್ವೇಯರ್
ಶ್ರೀಕೃಷ್ಣಮೂರ್ತಿ ಅವರು 50 ಸಾವಿರ ರೂಪಾಯಿ, ಬಿ.ಕೆ. ರಾಜು, ಭೂದಾಖಲೆಗಳ ಸಹಾಯಕ ನಿರ್ದೇಶಕರು, ಮಂಗಳೂರು ತಾಲೂಕು ಅವರು 10 ಸಾವಿರ ರೂಪಾಯಿ, ಹಾಗೂ ಎಸ್. ಧನಶೇಖರ, ಸರ್ವೆ ಸುಪರ್‌ವೈಸ್‌ರ್, ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿ ಮಂಗಳೂರು ತಾಲೂಕು ಅವರು 10 ಸಾವಿರ ರೂಪಾಯಿ ಲಂಚವನ್ನು ಬೇಡಿಕೆಯಿಟ್ಟಿರುವ ಕುರಿತು ಪಿರ್ಯಾದುದಾರರು ಲೋಕಾಯುಕ್ತದಲ್ಲಿ ದೂರು ನೀಡಿದ್ದರು.
ಲೋಕಾಯುಕ್ತ ಪೊಲೀಸರು ಸರಿಯಾಗಿ ಬಲೆ ಬೀಸಿ, ದಿನಾಂಕ 27.11.2025ರಂದು ಕೃಷ್ಣಮೂರ್ತಿಯವರಿಂದ ಪಿರ್ಯಾದುದಾರರಿಂದ 20 ಸಾವಿರ ರೂಪಾಯಿ, ಬಿ.ಕೆ. ರಾಜು ಮತ್ತು ಎಸ್. ಧನಶೇಖರರಿಂದ ತಲಾ ಐದು ಸಾವಿರ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುವ ವೇಳೆ ಬಿಡಾರದಲ್ಲಿ ಬಂಧಿಸಿದರು. ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಎಸ್ಪಿ (ಪ್ರಭಾರ) ಕುಮಾರ್ ಚಂದ್ರರ ನೇತೃತ್ವದಲ್ಲಿ ಡಿವೈಎಸ್ಪಿ ಡಾ. ಗಾನ.ಪಿ. ಕುಮಾರ್, ಸುರೇಶ್ ಕುಮಾರ್ ಪಿ, ಇನ್ಸ್‌ಪೆಕ್ಟರ್ ಭಾರತಿ, ಚಂದ್ರಶೇಖರ್ ಕೆ.ಎನ್, ರವಿ ಪವಾರ್, ರಾಜೇಂದ್ರ ನಾಯ್ಕ್, ಸಿಬ್ಬಂದಿಗಳಾದ ಮಹೇಶ್, ರಾಜಪ್ಪ, ರಾಧಾಕೃಷ್ಣ, ಆದರ್ಶ್, ರಾಮ ನಾಯ್ಕ, ವಿವೇಕ್, ವಿನಾಯಕ, ಪ್ರವೀಣ್, ಗಂಗಣ್ಣ, ನಾಗಪ್ಪ, ಮಹಾದೇವ, ಪವಿತ್ರ, ಲಕ್ಷ್ಮೀದೇವಿ, ದುಂಡಪ್ಪ, ರುದ್ರಗೌಡ, ರಾಜಶೇಖರ್, ರವಿ ಪವಾರ್ ಹಾಗೂ ಉಡುಪಿ ಸಿಬ್ಬಂದಿಯವರು ಸಮನ್ವಯದಿಂದ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
Post a Comment