Top News

ಉಡುಪಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ರೋಡ್ ಶೋ ಹಾಗೂ ಲಕ್ಷಕಂಠ ಗೀತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪೊಲೀಸರು ನೀಡಿದ ಸಲಹೆಗಳೇನು ?

ಉಡುಪಿ :ಪ್ರಧಾನಮಂತ್ರಿಗಳ ರೋಡ್ ಶೋನಲ್ಲಿ ಭಾಗವಹಿಸುವ ಸಾರ್ವಜನಿಕರು.

1. ರೋಡ್ ಶೋ ಕಾರ್ಯಕ್ರಮಕ್ಕೆ ಬರುವವರು ಬೆಳಿಗ್ಗೆ 10:30 ಗಂಟೆಯ ಒಳಗಾಗಿ ಆಗಮಿಸಿ ನಿಗಧಿತ ಸ್ಥಳ ಸೇರುವುದು. ತಡವಾಗಿ ಬಂದವರನ್ನು ನಿರ್ಬಂಧಿಸಲಾಗುವುದು.

2. ರೋಡ್ ಶೋ ಮಾರ್ಗದ ಎರಡೂ ಬದಿಯಲ್ಲಿ ಅಳವಡಿಸಲಾಗಿರುವ ಪೊಲೀಸ್ ಬ್ಯಾರಿಕೇಡ್ ದಾಟಬಾರದು.

3. ರೋಡ್ ಶೋ ಮಾರ್ಗದಲ್ಲಿ ನೀರಿನ ಬಾಟಲ್, ಬ್ಯಾಗ್‌ಗಳು, ಹೂವಿನ ಬುಕ್ಕೆ, ನೆನಪಿನ ಕಾಣಿಕೆ, ಕ್ಯಾಮರಾ, ಬಾಕ್ಸ್‌ಗಳನ್ನು, ಯಾವುದೇ ಹರಿತವಾದ ಆಯುಧಗಳು, ಚಾಕು, ಬೆಂಕಿ ಸಾಮಗ್ರಿಗಳು, ಡೋನ್‌ಗಳು, ಸ್ಪೋಟಕ ವಸ್ತುಗಳು, ಲೇಸರ್ ಲೈಟ್, ಧ್ವಜದ ಕಂಬಗಳು ಇತ್ಯಾದಿ ನಿಷೇಧಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನು ಸ್ಥಳದಲ್ಲೇ ಮಾಡಲಾಗಿದೆ.

4. ಎಲ್ಲಾ ಸಾರ್ವಜನಿಕರು ಕಡ್ಡಾಯವಾಗಿ ಪೊಲೀಸ್ ಪರಿಶೀಲನೆಗೆ ಒಳಗಾಗುವುದು.

5. ರೋಡ್ ಶೋ ಮಾರ್ಗದ ಯಾವುದೇ ಕಟ್ಟಡಗಳ ಮೇಲೆ ಹತ್ತಬಾರದು .
6. ಹಿರಿಯ ನಾಗರೀಕರು, ಮಕ್ಕಳು ಮತ್ತು ಮಹಿಳೆಯರಿಗೆ ಆದ್ಯತೆ ನೀಡಿ ಸಹಕರಿಸಬೇಕು. 3 ವರ್ಷದ ಕೆಳಗಿನ ಮಕ್ಕಳನ್ನು ಕರೆತರಬಾರದು.
7. ಯಾವುದೇ ಸಂಶಯಾಸ್ಪದ ವ್ಯಕ್ತಿ ಅಥವಾ ವಸ್ತು ಕಂಡಲ್ಲಿ ತಕ್ಷಣ ಹತ್ತಿರದ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಬೇಕು.
8. ಹೆಚ್ಚುವರಿಯಾಗಿ ಯಾವುದೇ ಧ್ವಜ, ಚಿತ್ರಪಟ ತರಕೂಡದು.
9. ಸಾರ್ವಜನಿಕರು ಯಾವುದೇ ಉದ್ವೇಗಕ್ಕೆ ಒಳಗಾಗಿ, ನೂಕುನುಗ್ಗಲು ಮಾಡತಕ್ಕದ್ದಲ್ಲ.

10. ಎಲ್ಲಾ ಸಂಧರ್ಭಗಳಲ್ಲಿ ಪೊಲೀಸರೊಂದಿಗೆ ತಾಳ್ಮೆಯಿಂದ ಸಹಕರಿಸುವುದು.

ಲಕ್ಷಕಂಠ ಗೀತೋತ್ಸವದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಸಲಹೆಗಳು

1. ಅಧೀಕೃತ ಪಾಸ್ ಹೊಂದಿದ ಸಾರ್ವಜನಿಕರಿಗೆ ಮಾತ್ರ ಪ್ರವೇಶ.

2. ಲಕ್ಷಕಂಠ ಗೀತೋತ್ಸವ ಕಾರ್ಯಕ್ರಮಕ್ಕೆ ಬರುವವರು ಬೆಳಿಗ್ಗೆ 9.30 ಗಂಟೆಯ ಒಳಗಾಗಿ ಆಗಮಿಸಿ ನಿಗಧಿತ ಸ್ಥಳ ಸೇರುವುದು. ತಡವಾಗಿ ಬಂದವರನ್ನು ನಿರ್ಬಂಧಿಸಲಾಗುವುದು.

3. ಕಾರ್ಯಕ್ರಮಕ್ಕೆ ನೀರಿನ ಬಾಟಲ್, ಬ್ಯಾಗ್‌ಗಳು, ಹೂವಿನ ಬೊಕ್ಕೆ, ನೆನಪಿನ ಕಾಣಿಕೆ, ಕ್ಯಾಮರಾ, ಬಾಕ್ಸ್‌ಗಳನ್ನು, ಆಯುಧಗಳು, ಚಾಕು, ಬೆಂಕಿ ಸಾಮಗ್ರಿಗಳು, ಡೋನ್‌ಗಳು, ಸ್ಪೋಟಕ ವಸ್ತುಗಳು, ಲೇಸರ್ ಲೈಟ್, ಧ್ವಜದ ಕಂಬಗಳು ಇತ್ಯಾದಿ ನಿಷೇಧಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನು ಸ್ಥಳದಲ್ಲೇ ಮಾಡಲಾಗಿದೆ.

4. ಎಲ್ಲಾ ಸಾರ್ವಜನಿಕರು ಕಡ್ಡಾಯವಾಗಿ ಪೊಲೀಸ್ ಪರಿಶೀಲನೆಗೆ ಒಳಗಾಗುವುದು.
5. ಕಾರ್ಯಕ್ರಮದ ಸುತ್ತಲಿನ ಕಟ್ಟಡಗಳ ಮೇಲೆ ಹತ್ತಬಾರದು.

6. ಹಿರಿಯ ನಾಗರೀಕರು, ಮಕ್ಕಳು ಮತ್ತು ಮಹಿಳೆಯರಿಗೆ ಆದ್ಯತೆ ನೀಡಿ ಸಹಕರಿಸಬೇಕು.

7. ಯಾವುದೇ ಸಂಶಯಾಸ್ಪದ ವ್ಯಕ್ತಿ ಅಥವಾ ವಸ್ತು ಕಂಡಲ್ಲಿ ತಕ್ಷಣ ಹತ್ತಿರದ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಬೇಕು.

8. ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ವಿದ್ಯೋದಯ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದು, ಸರತಿಯಲ್ಲಿ ಸಾಗಲು ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರೀಕರಿಗೆ ಆದ್ಯತೆ ನೀಡುವುದು.

9. ಅಧೀಕೃತವಾಗಿ ಯಾವುದೇ ಮಾಹಿತಿಯನ್ನು ಪೊಲೀಸ್ ಅಥವಾ ಜಿಲ್ಲಾಡಳಿತದಿಂದ ಪ್ರಕಟಿಸಲಾಗುವುದನ್ನು ಹೊರತುಪಡಿಸಿ ಸಾರ್ವಜನಿಕರು ಅನಾವಶ್ಯಕವಾಗಿ ಯಾವುದೇ ಊಹಾಪೋಹಗಳಿಗೆ ಕಿವಿಕೊಡಬಾರದು.

Post a Comment

Previous Post Next Post