ಕಾರ್ಕಳ: ಅಧಿಕಾರ, ನ್ಯಾಯ ಮತ್ತು ಸದಾಚಾರವನ್ನು ಸಂಕೇತಿಸುವ ಭಾರತದ ರಾಜದಂಡ 'ಸೆಂಗೋಲ್' ಕಾರ್ಕಳದ ಸುರೇಂದ್ರ ಆಚಾರ್ಯ ಅವರ ಕೈಚಳಕದಿಂದ ಪೆನ್ಸಿಲ್ ಸೀಸ(ಲೆಡ್)ದಲ್ಲಿ ಅದ್ಭುತವಾಗಿ ಮೂಡಿಬಂದಿದೆ.
ಸುರೇಂದ್ರ ಆಚಾರ್ಯ ಸೀಸದಲ್ಲಿ ಮೂಡಿದ ಸೆಂಗೋಲ್‌ನಲ್ಲಿ 1.5 ಮಿಲಿಮೀಟರ್ ದಪ್ಪ ಮತ್ತು ಅಗಲ ಹಾಗೂ 3 ಮಿಲಿ ಮೀಟರ್ ಉದ್ದದ ನಂದಿಯ ವಿಗ್ರಹವಿದ್ದು, 4 ಮಿಲಿ ಮೀಟರ್ ಸುತ್ತಳತೆ . 50 2.. ಉದ್ದವಿದೆ. ಒಟ್ಟಾರೆ ಲೆಕ್ಕಾಚಾರದ ಪ್ರಕಾರ ನಿಜವಾದ ರಾಜದಂಡಕ್ಕೆ ಹೋಲಿಸಿದಾಗ ಈ ಪೆನ್ಸಿಲ್ ಲೆಡ್ ರಾಜದಂಡ ಸುಮಾರು 31 ಪಟ್ಟು ಸಣ್ಣದಾಗಿದೆ. ನೈಜ ರಾಜದಂಡ 1524 ಮಿಲಿಮೀಟರ್ ಉದ್ದವಿದೆ.
ಹೊಸ್ಮಾರ್ ಸಮೀಪದ ಸುರೇಂದ್ರ ಆಚಾರ್ಯ ನೂರಾಳ್ ಬೆಟ್ಟು ಅವರು ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ ಕಲಾವಿದರಾಗಿದ್ದು, ಒಂದು ಪೆನ್ಸಿಲ್ ಸೀಸದಿಂದ 58 ಸರಪಳಿ ಕೊಂಡಿಗಳನ್ನು ಕೆತ್ತುವ ಮೂಲಕ ಪಾಕಿಸ್ತಾನದ ಕಲಾವಿದರೊಬ್ಬರ ದಾಖಲೆಯನ್ನು ಮುರಿದಿದ್ದರು.
ಈಗ ರಚಿಸಿದ ಈ ಸೆಂಗೋಲ್‌ನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಬೇಕು ಎನ್ನುವುದು ಸುರೇಂದ್ರ ಆಚಾರ್ಯ ಅವರ ಬಯಕೆಯಾಗಿದೆ. ಪ್ರಧಾನಿಯವರು ನ.28ರಂದು ಉಡುಪಿಗೆ ಆಗಮಿಸಲಿದ್ದು, ಆ ಸಂದರ್ಭ ನೀಡುವ ಬಯಕೆ ವ್ಯಕ್ತಪಡಿಸಿದ್ದಾರೆ.
Great
ReplyDeleteYess
DeletePost a Comment