ಬೆಳೆದ ಬಳಿಕ ಮೂಲವನ್ನೇ ಮರೆಯುವವರ ನಡುವೆ ಯಶಸ್ಸಿನ ಶಿಖರದಲ್ಲೂ ತವರಿನ ಪ್ರೀತಿ ಉಳಿಸಿಕೊಂಡ ತುಳುನಾಡಿನ ಸುನೀಲ್ ಶೆಟ್ಟಿ

Sunil Shetty from Tulu Nadu, who maintained his love for his hometown even at the peak of success, among those who forget their roots after growing up.
ಬಾಲಿವುಡ್‌ ಖ್ಯಾತ ನಟ ಸುನೀಲ್ ಶೆಟ್ಟಿ ಅವರ ಹೆಸರು ಕೇಳಿದರೆ 'ಆಕ್ಷನ್ ಹೀರೋ', 'ಅಣ್ಣ'ಎಂಬ ಬಿರುದುಗಳು ನೆನಪಿಗೆ ಬರುತ್ತವೆ. ಬಾಲಿವುಡ್ ಹಾಗೂ ತನ್ನ ಉದ್ಯಮದಲ್ಲೂ ಸಾಕಷ್ಟು ಯಶಸ್ಸು ಕಂಡರೂ ಎಂದಿಗೂ ತನ್ನ ಮೂಲನೆಲದ ಬಗ್ಗೆ ಅಪಾರ ಪ್ರೀತಿಯನ್ನು ಉಳಿಸಿಕೊಂಡು ಬಂದಿದ್ದಾರೆ.

ತುಳುನಾಡು ಮೂಲದ ಈ ಬಾಲಿವುಡ್ ಸ್ಟಾರ್ ಕುಟುಂಬದ ಮೂಲ ಇರುವುದು ಮೂಲ್ಕಿ ಸಮೀಪದಲ್ಲಿ. ಮುಂಬೈಯಲ್ಲಿ ನೆಲೆಸಿದ್ದರೂ, ಸುನೀಲ್ ಶೆಟ್ಟಿ ಅವರು ತಮ್ಮ ಮೂಲವನ್ನು ಎಂದಿಗೂ ಮರೆತಿಲ್ಲ. ಬಾಲಿವುಡ್‌ನಲ್ಲಿ ಯಶಸ್ಸಿನ ಅಗ್ರಸ್ಥಾನದಲ್ಲಿದ್ದರೂ, ಅವರ ಹೃದಯ ಸದಾ ಕರ್ನಾಟಕದ ಕರಾವಳಿಯ ಮಣ್ಣಿನ ಪರಿಮಳವನ್ನೇ ಘಮಿಸುತ್ತಿದೆ.
ತವರುನೆಲದ  ಸಂಸ್ಕೃತಿ, ಭಾಷೆ ಹಾಗೂ ಜನರೊಂದಿಗೆ ಅವರು ಹೊಂದಿರುವ ಆತ್ಮೀಯ ನಂಟು ಗಮನಾರ್ಹ. ತನ್ನ ಭಾಷೆಯ ಮಹತ್ವವನ್ನು ಪ್ರತೀ ಸಂದರ್ಭದಲ್ಲೂ ಅವರು ಹೆಮ್ಮೆಪಟ್ಟು ಉಲ್ಲೇಖಿಸುತ್ತಾರೆ. ಹಲವಾರು ಬಾರಿ ಅವರು “ನನ್ನ ತಾಯ್ನಾಡು ನನ್ನ ಶಕ್ತಿ, ನನ್ನ ಆತ್ಮವಿಶ್ವಾಸದ ಮೂಲ” ಎಂದು ಹೇಳಿದ್ದಾರೆ.

ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಹುಲಿವೇಷ ಸಂದರ್ಭ ತನ್ನದೇ ನೆಲದ ಸಂಸ್ಕೃತಿ ಎಂದು ಆಸಕ್ತಿಯಿಂದ ಬಂದು ಕಾರ್ಯಕ್ರಮದಲ್ಲಿ ಸೇರಿಕೊಂಡಿದ್ದು ಮಾತ್ರವಲ್ಲದೆ ಸೆಲೆಬ್ರಿಟಿ ಥರ ಇರದೆ ಈ ಕಲೆಯ ಮೇಲಿನ ಅಭಿಮಾನದಿಂದಾಗಿ ಹಾಲ್ಯಾಂಡ್‌ನಲ್ಲಿ ಶೂಟಿಂಗ್‌ನಲ್ಲಿದ್ದರೂ ಬಂದು ಮಿಥುನ್ ರೈ ಅವರ ಜತೆ ಕೈ ಜೋಡಿಸಿದ್ದರು. ಕಾರ್ಯಕ್ರಮ ಮುಗಿಯುವವರೆಗೂ ಯಾವುದೆ ಹಮ್ಮಿಲ್ಲದೆ ಜೊತೆಗಿದ್ದರು. 

ಹಲವು ವರ್ಷಗಳಿಂದ ತುಳು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕೆಂಬ ಇಂಗಿತ ಇದ್ದರೂ ಇದೀಗ ಅದನ್ನು ನನಸಾಗಿಸಿದ್ದಾರೆ. ರೂಪೇಶ್ ಶೆಟ್ಟಿ ನಿರ್ದೇಶನದ 'ಜೈ' ಸಿನಿಮಾದಲ್ಲೂ ಭಾಷಾಭಿಮಾನದಿಂದ ನಟಿಸಿ ತನ್ನ ನೆಲಮೂಲದ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಚಿತ್ರರಂಗದ ಹೊರತಾಗಿ ಅವರು ಸಾಮಾಜಿಕ ಸೇವೆಯಲ್ಲೂ ಸಕ್ರಿಯರಾಗಿದ್ದಾರೆ. ಶಿಕ್ಷಣ, ಕ್ರೀಡೆ ಹಾಗೂ ಪರಿಸರ ಸಂರಕ್ಷಣೆ ಕ್ಷೇತ್ರಗಳಲ್ಲಿ ಕೊಡುಗೆ ನೀಡುತ್ತಾ ಬಂದಿರುವ ಸುನೀಲ್ ಶೆಟ್ಟಿ, ತಮ್ಮ ಜನರ ಅಭಿವೃದ್ಧಿಗೆ ಸದಾ ಆಸಕ್ತಿ ತೋರಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ, ಕ್ರೀಡಾ ಸೌಲಭ್ಯಗಳ ನಿರ್ಮಾಣಕ್ಕೆ ಸಹಾಯ ಮಾಡಿರುವ ಅವರು ನಿಜಕ್ಕೂ ಹಲವು ಸೆಲೆಬ್ರಿಟಿಗಳಿಗೆ ಮಾದರಿಯಾಗಿದ್ದಾರೆ.

ತವರು ನೆಲದ ಮೇಲಿನ ಅಭಿಮಾನ ಮತ್ತು ನಂಟು ಇಂದಿಗೂ ಅವರ ಬದುಕಿನ ಭಾಗವಾಗಿದೆ. ಹಲವು ಬಾರಿ ಅವರು ಕರಾವಳಿಯ ಉತ್ಸವಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು, ಜನರ ಹತ್ತಿರ ಇರುವ ಅವರ ಮನಸ್ಸಿನ ಪ್ರತೀಕವಾಗಿದೆ.

Post a Comment

Previous Post Next Post