ಲಾಲ್ ಬಾಗ್‌ನಲ್ಲಿ ಅಕ್ರಮ ಇ-ಸಿಗರೇಟ್ ಮಾರಾಟ ಜಾಲಕ್ಕೆ ಬರ್ಕೆ ಪೊಲೀಸರ ಬಲೆ – ₹9.72 ಲಕ್ಷ ಮೌಲ್ಯದ ಸೊತ್ತು ವಶ

LMangaluru: Barke Police Station personnel have seized goods worth Rs. 9,72,745 after discovering that e-cigarettes and other tobacco products were being sold illegally at the “Invitation” shop in Saibeen Complex in the city’s Lalbagh area.
ಮಂಗಳೂರು: ನಗರದ ಲಾಲ್ ಬಾಗ್ ಪ್ರದೇಶದಲ್ಲಿರುವ ಸಾಯಿಬೀನ್ ಕಾಂಪ್ಲೆಕ್ಸ್‌ನ “ಆಮಂತ್ರಣ” ಅಂಗಡಿಯಲ್ಲಿ ಅಕ್ರಮವಾಗಿ ಇ-ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳ ಮಾರಾಟ ನಡೆಯುತ್ತಿದ್ದುದನ್ನು ಬರ್ಕೆ ಪೊಲೀಸ್ ಠಾಣಾ ಸಿಬ್ಬಂದಿ ಪತ್ತೆ ಹಚ್ಚಿ ರೂ. 9,72,745 ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸ್ ಆಯುಕ್ತರ ಮಾಹಿತಿ ಪ್ರಕಾರ, ನಿಷೇಧಿತ ಇ-ಸಿಗರೇಟ್, ವಿದೇಶಿ ಹಾಗೂ ಸ್ವದೇಶಿ ಸಿಗರೇಟ್‌ಗಳು ಮತ್ತು ಹುಕ್ಕಾ ಸೇವನೆಗೆ ಬಳಸುವ ಸಾಧನಗಳನ್ನು ಯಾವುದೇ ಪರವಾನಗಿಯಿಲ್ಲದೆ ಸಾರ್ವಜನಿಕರಿಗೆ, ವಿಶೇಷವಾಗಿ ಯುವಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ, ಅಕ್ಟೋಬರ್ 6, 2025ರಂದು ಸಂಜೆ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಕೊಟ್ಟಾರಿ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ದಾಳಿಯಲ್ಲಿ ಒಟ್ಟು 847 ಇ-ಸಿಗರೇಟ್‌ಗಳು (ಅಂದಾಜು ಮೌಲ್ಯ ₹4,43,125), ಸ್ವದೇಶಿ ಮತ್ತು ವಿದೇಶಿ ಬ್ರಾಂಡ್‌ನ 498 ಪ್ಯಾಕ್‌ಗಳು (ಅಂದಾಜು ಮೌಲ್ಯ ₹5,09,120) ಹಾಗೂ ಹುಕ್ಕಾ ಉಪಕರಣಗಳು(ಅಂದಾಜು ಮೌಲ್ಯ ₹20,500) ವಶಪಡಿಸಿಕೊಳ್ಳಲಾಯಿತು.

ಈ ಪ್ರಕರಣದಲ್ಲಿ ಸಂತೋಷ್ (32, ಬಂಟ್ವಾಳ ತಾಲೂಕು), ಇಬ್ರಾಹಿಂ ಇರ್ಷಾದ್ (33, ಕುದ್ರೋಳಿ) ಹಾಗೂ ಅಂಗಡಿಯ ಮಾಲಕ ಶಿವು ದೇಶಕೋಡಿ ವಿರುದ್ಧ Prohibition of Electronic Cigarettes Act, 2019 ಮತ್ತು COTPA Amendment Bill, 2015 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ತನಿಖೆಯನ್ನು ಬರ್ಕೆ ಠಾಣಾ ಪೊಲೀಸರು ಮುಂದುವರೆಸಿದ್ದಾರೆ.

Post a Comment

Previous Post Next Post