Top News

ದಸರಾ ಉದ್ಘಾಟನೆ ಹಾಗೂ ಸಿಎಂ, ಬಾನು ಮುಷ್ತಾಕ್ ವಿರುದ್ಧ ಅಸಭ್ಯ ಪೋಸ್ಟ್ ; ಆರೋಪಿ ಪುರುಷೋತ್ತಮ್ ಆಚಾರ್ಯ ಬಂಧನ

ಸುಳ್ಯ : ಸಾಮಾಜಿಕ ಜಾಲತಾಣ Facebook ನಲ್ಲಿ “Purush Acharya” ಎಂಬ ಹೆಸರಿನ ಖಾತೆಯಿಂದ ದಸರಾ ಉದ್ಘಾಟನೆ ಮಾಡಿದ ಬಾನು ಮುಸ್ತಾಕ್ ರವರ ಹಾಗೂ ಮಾನ್ಯ ಮುಖ್ಯಮಂತ್ರಿ ರವರ ಬಗ್ಗೆ ಅಸಭ್ಯ ಪದಗಳಲ್ಲಿ ನಿಂದನಾತ್ಮಕ ಪೋಸ್ಟ್ ಮಾಡಿರುವ ಘಟನೆ ಹಿನ್ನೆಲೆಯಲ್ಲಿ, ಸುಳ್ಯ ಮತ್ತು ಸುಬ್ರಮಣ್ಯ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಸುಳ್ಯ ಪೊಲೀಸ್ ಠಾಣೆಯಲ್ಲಿ  ಮತ್ತು ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 55/2025 - ಕಲಂ 353(3), 353(4) BNS ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಸಹಕಾರದಿಂದ ಸುಳ್ಯ ಪೊಲೀಸರು ಆರೋಪಿಯಾದ ಪುರುಷೋತ್ತಮ ಆಚಾರ್ಯ (ಬರಿಮಾರು, ಬಂಟ್ವಾಳ ತಾಲೂಕು) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

Post a Comment

Previous Post Next Post