Top News

ಪ್ರಕಾಶ್ ರಾಜ್, ಮೈಮ್ ರಮೇಶ್ ಸೇರಿದಂತೆ ದಕ್ಷಿಣ ಕನ್ನಡ ಮೂಲದ ಹಲವರಿಗೆ ರಾಜ್ಯೋತ್ಸವ ಪ್ರಶಸ್ತಿ ; ಜಿಲ್ಲೆಯಲ್ಲೇ ನೆಲೆಸಿರುವ ಸಾಧಕರು ಅವಕಾಶ ವಂಚಿತರಾದರೆ ?

ಮಂಗಳೂರು:  ಪ್ರಸಕ್ತ 2025ನೇ ವರ್ಷದ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ ನಾನಾ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ದೊರಕಿದೆ.

ಜಾನಪದ ಕ್ಷೇತ್ರದಲ್ಲಿ ಸಿಂಧು ಗುಜರನ್, ಚಲನಚಿತ್ರ ಕ್ಷೇತ್ರದಲ್ಲಿ ಪ್ರಕಾಶ್ ರಾಜ್, ಸಮಾಜಸೇವೆ ಕ್ಷೇತ್ರದಲ್ಲಿ ಕೋರಿನ್ ಆಂಟೋನಿಯಟ್ ರಸ್ಕೀನಾ, ಸಂಕೀರ್ಣ ಕ್ಷೇತ್ರದಲ್ಲಿ ಉಮೇಶ ಪಂಬದ, ಹೊರನಾಡು ಹಾಗೂ ಹೊರದೇಶ ವಿಭಾಗದಲ್ಲಿ ಜಕಾರಿಯಾ ಬಜಪೆ (ಸೌದಿ) ಮತ್ತು ಪಿ.ವಿ. ಶೆಟ್ಟಿ (ಮುಂಬೈ), ಮಾಧ್ಯಮ ಕ್ಷೇತ್ರದಲ್ಲಿ ಬಿ.ಎಂ. ಹನೀಫ್, ರಂಗಭೂಮಿ ವಿಭಾಗದಲ್ಲಿ ಮೈಮ್ ರಮೇಶ್, ಯಕ್ಷಗಾನ ಕ್ಷೇತ್ರದಲ್ಲಿ ಕೋಟ ಸುರೇಶ ಬಂಗೇರ, ಐರಬೈಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯ ಮೂಲದವರಾದ ಕೆಲವರು ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿಗೆ ಪಾತ್ರರಾಗಿರುವುದರಿಂದ ಸಂತೋಷ ವ್ಯಕ್ತವಾದರೂ, ಅನೇಕರ ಅಭಿಪ್ರಾಯದಲ್ಲಿ ಜಿಲ್ಲೆಯಲ್ಲೇ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ಪ್ರತಿಭೆಗಳಿಗೆ ಈ ಬಾರಿ ಅವಕಾಶ ದೊರಕದಿರುವುದು ಚರ್ಚೆಗೂ ಕಾರಣವಾಗಿದೆ.

#kannadarajyotsava #mangalore

Post a Comment

Previous Post Next Post