ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಮಂಗಳೂರು ಇದರ ನೂತನ ಅಧ್ಯಕ್ಷರಾಗಿ ಕುಸುಮಾ ಎಚ್.ದೇವಾಡಿಗ ಆಯ್ಕೆಯಾಗಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ವಿಶಾಲ್ ಎಚ್.ಸಾಲಿಯಾನ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಂಘದ 48ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ವಿ.ಕೃಷ್ಣದಾಸ್ ಕಾಮತ್, ನಿಖಿಲ್ ಉಲ್ಲಾಸ್ ಡಿಸಿಲ್ವ, ಎಂ.ದುರ್ಗಾ ಪಿ.ಹೆಗ್ಡೆ ಉಪಾಧ್ಯಕ್ಷರಾಗಿ, ವಿಶಾಲ್ ರಾವ್ ಬಿ. ಕಾರ್ಯದರ್ಶಿಯಾಗಿ, ಅರ್ನಾಲ್ಡ್ ಡಿಸೋಜಾ ಕೋಶಾಧಿಕಾರಿಯಾಗಿ, ವಾಲ್ಟರ್ ವೈಗಸ್ ಹಾಗೂ ಸಿರಿಲ್ ಪಿ.ಜೆ. ಜಂಟಿ ಕಾರ್ಯದರ್ಶಿಗಳಾಗಿ ಆಯ್ಕೆಯಾದರು. ಹಾಗೂ 24 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನೂ ಆಯ್ಕೆ ಮಾಡಲಾಯಿತು.
Post a Comment