Top News

ಗ್ರಾಮೀಣ ಕುಶಲಕರ್ಮಿಗಳಿಗೆ ಹೊಲಿಗೆ ಯಂತ್ರ ಸೇರಿದಂತೆ ಹಲವು ಉಚಿತ ಉಪಕರಣ ವಿತರಣೆ ; ಅರ್ಜಿ ಸಲ್ಲಿಸುವುದು ಹೇಗೆ ? ಇಲ್ಲಿದೆ ಮಾಹಿತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿರುವ ತರಬೇತಿ ಪಡೆದ ಮಹಿಳಾ ಕುಶಲಕರ್ಮಿಗಳಿಗೆ ಜಿಲ್ಲಾ ಔದ್ಯಮಿಕ ಕೇಂದ್ರ ಮತ್ತು ವೃತ್ತಿಪರ ಯೋಜನೆಯಡಿ ಉಚಿತ ಉಪಕರಣಗಳನ್ನು ನೀಡಲಾಗುತ್ತಿದೆ.

ಹೊಲಿಗೆಯಂತ್ರ, ಗಾರೆ ಕೆಲಸ, ಕಾನ್ವೆಂಟ್ರಿ, ಕಮ್ಮಾರಿಕೆ, ಗೋಲ್ಡ್–ಸಿಲ್ವರ್ ಸ್ಮಿತ್ ಕೆಲಸ ಹಾಗೂ ಇಲೆಕ್ಟ್ರಿಕಲ್ ವೃತ್ತಿಯಂತಹ ವಿವಿಧ ಕಸುಬುಗಳಲ್ಲಿ ತೊಡಗಿರುವ ಅರ್ಹ ಮಹಿಳಾ ಕುಶಲಕರ್ಮಿಗಳಿಗೆ ಗರಿಷ್ಠ ರೂ.8,000/- ಮೌಲ್ಯದ ಉಪಕರಣಗಳನ್ನು ಉಚಿತವಾಗಿ ವಿತರಿಸಲಾಗುವುದು.
ಉಪಕರಣಗಳನ್ನು ಪಡೆಯಲು ಆಸಕ್ತರಾಗಿರುವ ಗ್ರಾಮೀಣ ಪ್ರದೇಶದ ಅರ್ಜಿದಾರರು 2025ರ ಅಕ್ಟೋಬರ್ 23 ರಿಂದ ನವೆಂಬರ್ 23ರವರೆಗೆ ಜಿಲ್ಲಾ ಪಂಚಾಯತ್ ವೆಬ್‌ಸೈಟ್ zpdk.karnataka.gov.in ನಲ್ಲಿ ನೀಡಿರುವ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು (ಗ್ರಾ.ಕೈ), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯತ್ ಕೈಗಾರಿಕಾ ವಿಭಾಗ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಯೆಯ್ಯಾಡಿ, ಮಂಗಳೂರು — ದೂರವಾಣಿ ಸಂಖ್ಯೆ: 0824-2225071 ಗೆ ಸಂಪರ್ಕಿಸಲು ಸೂಚಿಸಲಾಗಿದೆ.

Post a Comment

Previous Post Next Post