ಮೈಸೂರು ದಸರಾ ಜಂಬೂ ಸವಾರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಟ್ಯಾಬ್ಲೋಗೆ ದ್ವಿತೀಯ ಪ್ರಶಸ್ತಿ

ನವರಾತ್ರಿಯ ಅಂಗವಾಗಿ ಅ.2ರಂದು ನಡೆದ ಮೈಸೂರು ದಸರಾ ಮಹೋತ್ಸವದ ಭವ್ಯ ಜಂಬೂ ಸವಾರಿ ಮೆರವಣಿಗೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಿಕ ಕ್ರೀಡೆಗಳನ್ನು ಪ್ರತಿಬಿಂಬಿಸುವ ಆಕರ್ಷಕ ಟ್ಯಾಬ್ಲೋ ಪ್ರದರ್ಶಿಸಲಾಯಿತು. ಈ ಟ್ಯಾಬ್ಲೋಗೆ ದ್ವಿತೀಯ ಪ್ರಶಸ್ತಿ ಸಂದಿದೆ.
ಯಕ್ಷಗಾನ, ಕಂಬಳ, ಹುಲಿವೇಷ ಸೇರಿದಂತೆ ತುಳುನಾಡಿನ ವೈಶಿಷ್ಟ್ಯವನ್ನು ತೋರಿಸುವ ಸಾಂಪ್ರದಾಯಿಕ ಹಾಗೂ ಜಾನಪದ ಕಲೆಗಳ ಚಿತ್ರಣವನ್ನು ಟ್ಯಾಬ್ಲೋ ಮೂಲಕ ಜೀವಂತವಾಗಿ ಮೂಡಿಸಲಾಗಿತ್ತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಟ್ಯಾಬ್ಲೋ ನಿರ್ಮಿಸಲಾಗಿದ್ದು, ಗ್ರಾಮೀಣ ಕೈಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಹೆಗಡೆ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

Post a Comment

Previous Post Next Post